ಬಾಗಲಕೋಟ: ಬಿಜೆಪಿಗೆ ಅಧಿಕಾರ ಕೊಟ್ಟು ಜನ ಬೇಸತ್ತು ಹೋಗಿದ್ದಾರೆ ಕಾಂಗ್ರೆಸ್‌ನ ಭದ್ರಕೋಟೆ ಆಗಿರುವ ತೇರದಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವು ಖಚಿತ ಎಂದು ಅಧ್ಯಕ್ಷ ಸಚಿನ್ ಮೇಘಾ ಹೇಳಿದರು.
ಭಾರತ ಜೋಡೋ ಯಾತ್ರೆಯ ಅಂಗವಾಗಿ ಬನಹಟ್ಟಿ ಯಲ್ಲಿ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು .
ಕಳೆದ 70 ವರ್ಷದಿಂದ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಪ್ರಧಾನಿ ಮೋದಿ ವಿನಾಕಾರಣ ಅಪ ಪ್ರಚಾರ ಮಾಡುತ್ತಿರುವುದು ಜನರಿಗೆ ಗೊತ್ತಾಗಿದೆ . ಕಾಂಗ್ರೆಸ್ ನಿಂದ ದೇಶಕ್ಕೆ ಎಷ್ಟೊಂದು ಒಳಿತಾಗಿದೆ ಎಂಬುದು ಜನಕ್ಕೆ ಗೊತ್ತಿದೆ , ಮೋದಿ ಬರೀ ಸುಳ್ಳು ಭಾಷಣ ಮಾಡಿ ಮಾತಿನಲ್ಲಿ ಮೋಡಿ ಮಾಡುತ್ತಿದ್ದಾರೆ , ಸ್ವಿಸ್ ಬ್ಯಾಂಕ್‌ನಿಂದ ಹಣ ತರುತ್ತೇನೆ ಎಂದು ಬರೀ ಬೊಗಳೆ ಬಿಡುವುದು ಬಿಜೆಪಿಯ ಪ್ರಮುಖ ಗುಣವಾಗಿದೆ. ಈ ಬಾರಿ ಬಿಜೆಪಿ ರಾಜ್ಯದಲ್ಲಿ ನೆಲ ಕಚ್ಚುವುದು ಖಚಿತ ಎಂದರು .
Kshetra Samachara
07/10/2022 09:37 am