ಬಾಗಲಕೋಟೆ: ಮಹತ್ವಾಕಾಂಕ್ಷಿ ಮಂಟೂರ ಮಹಾಲಕ್ಷ್ಮಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಗಲಗಲಿ ಬಳಿ ನಿರ್ಮಾಣವಾಗುತ್ತಿರುವ ಜಾಕ್ ವೆಲ್ ಹಾಗೂ ಪೈಪ್ ಲೈನ್ ಕಾಮಗಾರಿ ಸ್ಥಳಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಕಾಮಗಾರಿ ಕುರಿತು ಅಧಿಕಾರಿಗಳಿಂದ ವಿವರ ಮಾಹಿತಿ ಪಡೆದ ಅವರು ಈ ಏತ ನೀರಾವರಿ ಯೋಜನೆ 228 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಯೋಜನೆಯಿಂದ ಮುಧೋಳ ಮತ್ತು ಬೀಳಗಿ ತಾಲೂಕಿನ 43 ಗ್ರಾಮಗಳ ನೀರಾವರಿ ವಂಚಿತ 30 ಸಾವಿರ ಎಕರೆ ಜಮೀನು ನೀರಾವರಿ ವ್ಯಾಪ್ತಿಗೆ ಒಳಪಡಲಿದೆ ಎಂದರು.
PublicNext
04/10/2022 11:16 pm