ಬಾಗಲಕೋಟೆ: ಇಂದಿನ ದಾವಂತದ ಬದುಕಿನಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಕಡಿಮೆಯಾಗಿದ್ದು, ಇದರ ಪ್ರತಿಫಲವಾಗಿ ನಾವು ಇಂದು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದೇವೆ ಎಂದು ಜಿಲ್ಲೆಯ ಅಕ್ಷರದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಹೇಳಿದ್ದಾರೆ.
ಬಾದಾಮಿ ತಾಲೂಕು ಯಂಕಂಚಿ ಮಣಿನಾಗರ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕೀಯರ ವಸತಿ ಶಾಲೆಯಲ್ಲಿ ಅಕ್ಷರದಾಸೋಹ ಯೋಜನೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಪ್ರಾಚೀನ ಆಹಾರ ಪದ್ಧತಿಯನ್ನು ನಾವು ಇಂದು ಸ್ವೀಕರಿಸುವುದು ಅನಿವಾರ್ಯ ಹಾಗೂ ಅತಿ ಅವಶ್ಯಕವಾಗಿದೆ. ಇಂದು ಮಕ್ಕಳು ಸಮತೋಲಿತ ಆಹಾರದ ಬಗ್ಗೆ ತಿಳಿದುಕೊಂಡು ಮನೆಯರಿಗೂ ಮನವರಿಕೆ ಮಾಡಿಕೊಟ್ಟು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ಜಿಲ್ಲಾ ಯೋಜನಾ ಉಪಸಮನ್ವಯ ಅಧಿಕಾರಿ(ಗುಣಮಟ್ಟ) ಜಾಸ್ಮಿನ ಕಿಲ್ಲೇದಾರ ಮಾತನಾಡಿ ಇಂದಿನ ಆಹಾರ ಪದ್ಧತಿ ಹಾಗೂ ಹಿಂದಿನ ಆಹಾರ ಪದ್ಧತಿಯ ಹೋಲಿಕೆಯೊಂದಿಗೆ ಅಂದಿನ ಪ್ರಾದೇಶಿಕ ಹಾಗೂ ಸ್ಥಳೀಯ ಆಹಾರದ ಗುಣಮಟ್ಟ ಮತ್ತು ಪೋಷಕಾಂಶಗಳ ಬಗ್ಗೆ ಮತ್ತು ಯಾವ ಯಾವ ಪದಾರ್ಥಗಳಲ್ಲಿ ಯಾವ ಯಾವ ಪೋಷಕಾಂಶಗಳಿರುತ್ತವೆ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ತಾಲೂಕು ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಆರ್.ಎಸ್.ಆದಾಪೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Kshetra Samachara
04/10/2022 10:58 am