ರಬಕವಿ-ಬನಹಟ್ಟಿ: ಕಳೆದ ಎರಡು ವರ್ಷಗಳಿಂದ ದೇಶ ಸಂಚಾರದಲ್ಲಿದ್ದ ಆಚಾರ್ಯ 108 ಕುಲರತ್ನಭೂಷಣ ಮಹಾರಾಜರು ಮಹಾರಾಷ್ಟ್ರದ ಅಬ್ದುಲವಾಟ್ ಮಾರ್ಗವಾಗಿ ಹಳಿಂಗಳಿ ಗ್ರಾಮ ಪ್ರವೇಶಿಸುವ ಕಾರ್ಯಕ್ರಮವು ಸೋಮವಾರ ಸಂಭ್ರಮ ಸಡಗರದಿಂದ ಜರುಗಿತು.
ಗ್ರಾಮದ ತೇರದಾಳ ರಸ್ತೆಯ ಮೂಲಕ ಭವ್ಯಮೆರವಣಿಗೆಯಲ್ಲಿ ಝಾಂಜ ಪಥಾಕೆ, ಕರಡಿ ಮಜಲು, ಶ್ರಾವಕಿಯರ ಕೋಲು ನೃತ್ಯ ಸೇರಿದಂತೆ ಹಲವು ವಾದ್ಯಮೇಳಗಳು ಮೇಳೈಸಿದವು. ಗುರುಮಹಾರಾಜ ಕೀ ಜೈ ಎಂಬ ಘೋಷಣೆಗಳು ಕೇಳಿಬಂದವು. ದಾರಿಯುದ್ದಕ್ಕೂ ರಂಗೋಲಿ ಹಾಕಿ ಸಿಂಗರಿಸಲಾಗಿತ್ತು. ಮನೆಮನೆಗಳ ಮುಂದೆ ಮಹಾರಾಜರ ಪಾದಪೂಜೆ ನೆರವೇರಿತು. ಆರಿಕಾಗಳಾದ 105 ಜ್ಞಾನಭೂಷಣಮತಿ, ದರ್ಶನಭೂಷಣಮತಿ, ಚಾರಿತ್ರಭೂಷಣಮತಿ ಅವರುಗಳನ್ನು ಮೆರವಣಿಗೆ ಮೂಲಕ ಕರೆತರಲಾಯಿತು.
ಶಾಲಾ ಮಕ್ಕಳು, ಶ್ರಾವಕ, ಶ್ರಾವಕಿಯರು ಕುಮಾರ, ಕುಮಾರಿಕೆಯರು ಸಮವಸ್ತ್ರಗಳಲ್ಲಿ ಭಾಗಿಯಾಗಿ, ಮೆರವಣಿಗೆಗೆ ಕಳೆತುಂಬಿದರು.
Kshetra Samachara
09/12/2024 04:03 pm