ಮೇಷ ರಾಶಿ: ಈ ರಾಶಿಚಕ್ರದ ಜನರು ತಮ್ಮ ಸಹೋದ್ಯೋಗಿಗಳೊಂದಿಗೆ ಕೆಲಸದ ವಿಷಯದಲ್ಲಿ ಸ್ಪರ್ಧೆ ಹೊಂದಿರುತ್ತಾರೆ. ಉದ್ಯಮಿಗಳು ಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ವ್ಯಾಪಾರದ ಬೆಳವಣಿಗೆಗೆ ಬಂಡವಾಳ ಹೂಡಿಕೆಗೆ ಯೋಜಿಸಬೇಕು. ಯುವಕರು ಬಹು ಕಾರ್ಯಕ್ಕೆ ಸಿದ್ಧರಾಗಿರಬೇಕು. ಆತ್ಮೀಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕೆಟ್ಟ ದಿನಚರಿಯು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಬಡವರಿಗೆ ಅನ್ನದಾನ ಮಾಡಿದ್ರೆ ನಿಮಗೆ ಪುಣ್ಯ ಬರುತ್ತದೆ.
ವೃಷಭ ರಾಶಿ: ವೃಷಭ ರಾಶಿಯ ಜನರು ತಮ್ಮ ಅಧೀನ ಅಧಿಕಾರಿಗಳ ಅಭಿಪ್ರಾಯಕ್ಕೆ ಪ್ರಾಮುಖ್ಯತೆ ನೀಡುತ್ತಾರೆ, ಯಾವುದೇ ವಿಷಯದ ಬಗ್ಗೆ ಅವರಿಂದ ಸಲಹೆ ಪಡೆದುಕೊಳ್ಳಿ. ವ್ಯಾಪಾರಸ್ಥರು ತಮ್ಮ ವ್ಯವಹಾರದಲ್ಲಿ ಪ್ರಚಾರಕ್ಕೂ ಪ್ರಾಮುಖ್ಯತೆ ನೀಡಬೇಕು. ಇದರ ಸಹಾಯ ಪಡೆದು ಉತ್ತಮ ಲಾಭ ಗಳಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ದುರ್ಬಲ ವಿಷಯಗಳ ಬಗ್ಗೆ ಚಿಂತಿತರಾಗುತ್ತಾರೆ, ಆದರೆ ಅಸಮಾಧಾನಗೊಳ್ಳುವ ಬದಲು ಏಕಾಗ್ರತೆಯಿಂದ ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಿ. ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರದಿಂದಿರಬೇಕು. ಜವಾಬ್ದಾರಿಗಳ ಬಗ್ಗೆ ಮಾನಸಿಕ ಚಿಂತೆ ಇರುತ್ತದೆ, ಆದರೆ ವ್ಯರ್ಥವಾಗಿ ಚಿಂತಿಸಬೇಡಿ. ಉತ್ತಮ ಜನರೊಂದಿಗೆ ಸಂಪರ್ಕವನ್ನು ಮುಂದುವರಿಸಿದ್ರೆ ಭವಿಷ್ಯದಲ್ಲಿ ಪ್ರಯೋಜನಕಾರಿ.
ಮಿಥುನ ರಾಶಿ: ಈ ರಾಶಿಯ ಜನರು ತಮ್ಮ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಾರೆ. ನೀವು ಹೊಸ ವ್ಯಾಪಾರದ ಬಗ್ಗೆ ಯೋಜನೆ ರೂಪಿಸಬಹುದು. ಒಂದಕ್ಕಿಂತ ಹೆಚ್ಚು ವ್ಯವಹಾರ ಮಾಡಿದರೆ ಮಾತ್ರ ನೀವು ನಿರೀಕ್ಷಿತ ಲಾಭ ಪಡೆಯಬಹುದು. ಯುವಕರು ನಕಾರಾತ್ಮಕ ಆಲೋಚನೆಗಳಿಂದ ದೂರವಿರಬೇಕು, ಯಾವಾಗಲೂ ಧನಾತ್ಮಕವಾಗಿ ಮತ್ತು ಸಂತೋಷವಾಗಿರಲು ಪ್ರಯತ್ನಿಸಿ. ತಾಯಿಯ ಕಾಯಿಲೆಗಳಿಗೆ ಗಮನ ಕೊಡಬೇಕು. ನೀವು ಸಹ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಸೂಕ್ತ.
ಕರ್ಕ ರಾಶಿ: ಕರ್ಕಾಟಕ ರಾಶಿಯ ಜನರು ಕೆಲಸವನ್ನು ಪೂರ್ಣಗೊಳಿಸುವಲ್ಲಿ ಶ್ರದ್ಧೆಯೊಂದಿಗೆ ಬುದ್ಧಿಶಕ್ತಿ ಬಳಸಬೇಕು. ವ್ಯಾಪಾರಸ್ಥರು ಲಾಭದ ಕೊರತೆಯಿಂದ ದುಃಖಿತರಾಗುತ್ತಾರೆ, ವ್ಯಾಪಾರದಲ್ಲಿ ಲಾಭ ಮತ್ತು ನಷ್ಟ ಯಾವಾಗಲೂ ಇರುತ್ತದೆ. ಯುವಕರು ತಮ್ಮ ನಡವಳಿಕೆಯಲ್ಲಿ ನಮ್ರತೆಯನ್ನು ಕಾಪಾಡಿಕೊಳ್ಳಬೇಕು, ಇದು ಕಷ್ಟಕರ ಕಾರ್ಯಗಳನ್ನು ಸುಲಭಗೊಳಿಸುತ್ತದೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಿಮ್ಮ ಚಟುವಟಿಕೆಗಳನ್ನು ಹೆಚ್ಚಿಸಿ ಮತ್ತು ಜನರ ನಡುವೆ ಸಕ್ರಿಯವಾಗಿರುವಾಗ ಸ್ವಲ್ಪ ಸಮಯ ನೀಡಿ.
ಸಿಂಹ ರಾಶಿ: ಈ ರಾಶಿಯ ಜನರು ಸರ್ಕಾರಿ ನೌಕರಿ ಪಡೆಯಲು ಪ್ರಯತ್ನಿಸುತ್ತಿದ್ದು, ಯಶಸ್ಸು ಸಿಗಲಿದೆ. ವ್ಯವಹಾರದಲ್ಲಿ ನಷ್ಟ ಮತ್ತು ಲಾಭಗಳು ನಡೆಯುತ್ತಲೇ ಇರುತ್ತವೆ, ಆದರೆ ನಿರಂತರ ನಷ್ಟವಿದ್ದರೆ ನೀವು ಎಚ್ಚರದಿಂದಿರಬೇಕು. ಯುವಕರು ಯಾವುದೇ ಅಪರಿಚಿತರ ಮಾತಿಗೆ ಸಿಲುಕುವುದನ್ನು ತಪ್ಪಿಸಬೇಕು. ಕುಟುಂಬದ ಬಗ್ಗೆ ಹೆಚ್ಚು ಚಿಂತಿಸುವುದನ್ನು ತಪ್ಪಿಸಬೇಕು. ನಕಾರಾತ್ಮಕ ಪ್ರವೃತ್ತಿಗಳಿಂದ ದೂರವಿರಿ, ಈ ಪ್ರವೃತ್ತಿಯು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರು ಕಚೇರಿ ಕೆಲಸದಲ್ಲಿ ಹೆಚ್ಚು ಗಮನ ಹರಿಸಬೇಕು, ಇಲ್ಲದಿದ್ದರೆ ಕೆಲಸವು ಹದಗೆಡಬಹುದು. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಹೊಸ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಮನೆಯ ಅಗತ್ಯಗಳನ್ನು ಪೂರೈಸಬೇಕಾಗುತ್ತದೆ, ಇದಕ್ಕಾಗಿ ಹಣದ ವ್ಯವಸ್ಥೆ ಮಾಡಿ. ನೀವು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಬಯಸಿದ್ರೆ ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಯಾವುದೇ ನಿರ್ಧಾರವನ್ನು ಸಂಪೂರ್ಣ ಆತ್ಮವಿಶ್ವಾಸದಿಂದ ತೆಗೆದುಕೊಳ್ಳಬೇಕು.
ತುಲಾ ರಾಶಿ: ಹಣಕಾಸಿನ ವ್ಯವಹಾರ ಮಾಡುವ ಈ ರಾಶಿಯ ಜನರು ಕೆಲವು ದೊಡ್ಡ ಮತ್ತು ಒಳ್ಳೆಯ ವ್ಯವಹಾರ ಪಡೆಯುತ್ತಾರೆ. ಇದರಲ್ಲಿ ಅವರ ಆದಯವೂ ಉತ್ತಮವಾಗಿರುತ್ತದೆ. ಎಲೆಕ್ಟ್ರಾನಿಕ್ ಆಟಿಕೆಗಳನ್ನು ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಭರ್ಜಿರಿ ಲಾಭ ಸಿಗಲಿದೆ. ಯುವಕರು ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು, ಕೋಪದಲ್ಲಿ ಮಾಡಿದ ಕೆಲಸ ಕೆಡುವುದರ ಜೊತೆಗೆ ಆರೋಗ್ಯವನ್ನೂ ಕೆಡಿಸುತ್ತದೆ. ಮನೆಯ ಅಲಂಕಾರಕ್ಕೆ ಪ್ರಾಮುಖ್ಯತೆ ನೀಡಿ. ರಾಜಕೀಯಕ್ಕೆ ಸಂಬಂಧಿಸಿದವರ ಖ್ಯಾತಿ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಉದ್ಯೋಗಿಗಳ ವರ್ಗಾವಣೆಯ ಸಾಧ್ಯತೆ ಇದೆ. ಪ್ರಸ್ತುತ ಸಮಯವು ಉದ್ಯಮಿಗಳಿಗೆ ಆರ್ಥಿಕವಾಗಿ ಲಾಭದಾಯಕವಾಗಿದ್ದು, ವ್ಯಾಪಾರದಲ್ಲಿ ಬಂಡವಾಳ ಹೂಡಿಕೆ ಮಾಡಬೇಕು. ಯುವಜನತೆ ಗೊಂದಲದ ಸ್ಥಿತಿಯಲ್ಲಿದ್ದರೆ ಹಿರಿಯರಿಂದ ಅಭಿಪ್ರಾಯ ಪಡೆಯಬೇಕು. ಅವಿವಾಹಿತರು ಸುಸಂಸ್ಕೃತ ಮತ್ತು ಸದ್ಗುಣಶೀಲ ಹುಡುಗಿಯನ್ನು ಮದುವೆಯಾಗಬಯಸಿದರೆ ಮಾತೃದೇವತೆಯನ್ನು ಪೂಜಿಸಬೇಕು. ಬಡ ಮಕ್ಕಳಿಗೆ ಶಿಕ್ಷಣ ದಾನ ಮಾಡಬೇಕು.
ಧನು ರಾಶಿ: ಈ ರಾಶಿಯ ಸರ್ಕಾರಿ ಕೆಲಸ ಮಾಡುವವರಿಗೆ ಇಂದು ಸಮೃದ್ಧ ದಿನವಾಗಿರುತ್ತದೆ, ಬಡ್ತಿಯ ಬಗ್ಗೆ ಮಾಹಿತಿ ಪಡೆಯಬಹುದು. ಬುದ್ಧಿವಂತಿಕೆ ಮತ್ತು ಧೈರ್ಯ ಬಳಸಿ ವ್ಯಾಪಾರ ಮಾಡಿ. ಐಟಿ ಕ್ಷೇತ್ರದ ಯುವಕರು ಯಶಸ್ಸನ್ನು ಪಡೆಯುತ್ತಾರೆ, ಇತರ ಕ್ಷೇತ್ರಗಳ ಯುವಕರು ತಮ್ಮ ಗುರಿಗಳತ್ತ ಗಮನ ಹರಿಸಬೇಕು. ವೈದ್ಯರು ಸೂಚಿಸಿದ ಆಹಾರದಲ್ಲಿ ಯಾವುದೇ ರೀತಿಯ ಅಜಾಗರೂಕತೆ ವಹಿಸಬೇಡಿ. ನಿಮ್ಮ ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುತ್ತದೆ, ನೀವು ಸಂತೋಷ ಮತ್ತು ಪ್ರಯೋಜನಗಳನ್ನು ಸಹ ಪಡೆಯುತ್ತೀರಿ.
ಮಕರ ರಾಶಿ: ಮಕರ ರಾಶಿಯವರು ಕೇವಲ ಕೆಲಸದ ಬಗ್ಗೆ ಚಿಂತಿಸದೆ ಕೆಲಸ ಮಾಡಲು ಪ್ರಾರಂಭಿಸಬೇಕು. ಚಿಲ್ಲರೆ ವ್ಯಾಪಾರಿಗಳಿಗೆ ಇಂದು ಉತ್ತಮ ದಿನವಾಗಿರುತ್ತದೆ, ಉತ್ತಮ ಮಾರಾಟದಿಂದಾಗಿ ಗಳಿಕೆಯು ಉತ್ತಮವಾಗಿರುತ್ತದೆ. ಯುವಕರ ಸೃಜನಾತ್ಮಕ ಕೆಲಸಗಳತ್ತ ಗಮನ ಹರಿಸಬೇಕು. ಅವಿಭಕ್ತ ಕುಟುಂಬದಲ್ಲಿ ವಾಸಿಸುವವರು ಸದಸ್ಯರಲ್ಲಿ ಪರಸ್ಪರ ಹೊಂದಾಣಿಕೆ ಹೆಚ್ಚಿಸುವ ಕೆಲಸವನ್ನು ಮಾಡಬೇಕು, ಇದರಿಂದ ಮನೆಯ ವಾತಾವರಣವು ಉತ್ತಮವಾಗಿರುತ್ತದೆ. ಮಕ್ಕಳಲ್ಲಿ ಸೋಂಕು ತಗಲುವ ಸಾಧ್ಯತೆಯಿದ್ದು, ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸಹಾಯಕ್ಕಾಗಿ ಯಾರಾದರೂ ನಿಮ್ಮ ಬಳಿಗೆ ಬಂದರೆ, ಅವರನ್ನು ನಿರಾಶೆಗೊಳಿಸಬೇಡಿ ಸಾಧ್ಯವಾದಷ್ಟು ಸಹಾಯ ಮಾಡಿ.
ಕುಂಭ ರಾಶಿ: ಈ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಕಠಿಣ ಪರಿಶ್ರಮ ಹೆಚ್ಚು ಇರುತ್ತದೆ. ವ್ಯವಹಾರದಲ್ಲಿ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿ. ಯುವಕರು ಸ್ನೇಹಿತರ ಬಗ್ಗೆ ಅಸೂಯೆ ಪಡಬಾರದು. ಜಂಕ್ ಫುಡ್ ಆರೋಗ್ಯಕ್ಕೆ ಯಾವುದೇ ರೀತಿಯಿಂದಲೂ ಒಳ್ಳೆಯದಲ್ಲ. ನಿಮ್ಮ ರಹಸ್ಯ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ಇಲ್ಲದಿದ್ದರೆ ಅದೇ ಜನರ ಮೂಲಕ ನಿಮ್ಮ ಗೌರವಕ್ಕೆ ಧಕ್ಕೆಯಾಗುತ್ತದೆ.
ಮೀನ ರಾಶಿ: ಮೀನ ರಾಶಿಯವರ ಶ್ರಮ ವ್ಯರ್ಥವಾಗುವುದಿಲ್ಲ. ನಿಮ್ಮ ಶ್ರಮಕ್ಕೆ ತಕ್ಕನಾಗಿ ಗೌರವ ಮತ್ತು ಬಡ್ತಿ ಸಿಗಲಿದೆ. ವ್ಯಾಪಾರ ವರ್ಗವು ತಮ್ಮ ವ್ಯವಹಾರದಲ್ಲಿ ಬಂಡವಾಳ ಹೂಡಿಕೆ ಮಾಡಲು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಯುವಕರು ಸೋಮಾರಿತನದ ಸ್ನೇಹಿತರಾಗಬಾರದು, ಮಾದಕ ದ್ರವ್ಯಗಳಿಂದ ದೂರವಿರಬೇಕು. ನಿಮ್ಮ ಸುತ್ತಲಿನ ಪರಿಸರ ಸುಧಾರಿಸಲು ನೀವು ಸಹಾಯ ಮಾಡುತ್ತೀರಿ.
PublicNext
10/09/2022 08:12 am