ಮೇಷ: ಬಟ್ಟೆ , ದಿನಸಿ ವ್ಯಾಪಾರಸ್ಥರಿಗೆ ವಿಶೇಷ ಆದಾಯ. ಹಣಕಾಸು ಸಂಸ್ಥೆಗಳ ಉದ್ಯೋಗಿಗಳಿಗೆ ನಷ್ಟ ಅನುಭವಿಸುವ ಸಾಧ್ಯತೆ.
ವೃಷಭ: ತರಕಾರಿ ಹಣ್ಣುಗಳ ವ್ಯಾಪಾರಸ್ಥರಿಗೆ ಬಹು ಬೇಡಿಕೆಯಿಂದಾಗಿ ಅಧಿಕ ಲಾಭ. ಬಂಧುಗಳ ಮನೆಗೆ ಭೇಟಿ ನೀಡುವ ಸಾಧ್ಯತೆ.
ಮಿಥುನ: ಉದ್ಯೋಗದಲ್ಲಿ ಬದಲಾವಣೆ ನಿರೀಕ್ಷೆ. ನೆರೆಹೊರೆ ಯವರೊಂದಿಗೆ ವಿರಸ ತಲೆದೋರಬಹುದು. ಸಂಗಾತಿಗೆ ಭಾಗ್ಯೋದಯ.
ಕಟಕ: ತುರ್ತು ವಿಷಯಕ್ಕಾಗಿ ಸಂಬಂಧಿಕರ ನೆರವು. ಸಂಸಾರದಲ್ಲಿ ನೆಮ್ಮದಿ. ಸುತ್ತಾಟದಿಂದಾಗಿ ದೇಹಾಲಸ್ಯ. ಅನಿರೀಕ್ಷಿತ ಪ್ರಯಾಣ.
ಸಿಂಹ: ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ತೈಲ ವ್ಯಾಪಾರಿಗಳಿಗೆ ವ್ಯವಹಾರದ ವೃದ್ಧಿ. ಲೆಕ್ಕಪತ್ರ ಪರಿಶೀಲನೆಗೆ ನಿರ್ಧಾರ.
ಕನ್ಯಾ: ರಾಜಕೀಯ ವ್ಯಕ್ತಿಗಳಿಗೆ ಆಶಾದಾಯಕ ದಿನ. ಸರ್ಕಾರಿ ಹುದ್ದೆಯಲ್ಲಿರುವವರು ಆರೋಪವನ್ನು ಎದುರಿಸಬೇಕಾದೀತು.
ತುಲಾ: ರಫ್ತು ವ್ಯವಹಾರದಲ್ಲಿ ತೊಡಗಿಕೊಂಡಿರುವವರಿಗೆ ಉತ್ತಮ ಲಾಭ. ಪಾಲುಗಾರಿಕೆ ವ್ಯವಹಾರ ಮಾಡುವಾಗ ಜಾಗ್ರತೆ ಇರಲಿ.
ವೃಶ್ಚಿಕ: ಉದ್ಯೋಗ ಕ್ಷೇತ್ರದಿಂದ ಒಳ್ಳೆಯ ಸುದ್ದಿ. ಅತಿ ಕಾರ್ಯದಿಂದಾಗಿ ಆಯಾಸ. ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಸಾಧ್ಯತೆ.
ಧನುಸ್ಸು: ಮನೆಯ ಕೆಲಸಗಳು ಪೂರ್ಣಗೊಂಡು ನೆಮ್ಮದಿ. ಆಸ್ತಿ ವಿಚಾರದಲ್ಲಿ ಒತ್ತಾಯ ಪೂರ್ವಕ ಪ್ರಸ್ತಾಪಗಳು ಬರಲಿವೆ.
ಮಕರ: ಅಡೆತಡೆಗಳ ನಡುವೆಯೂ ಶುಭಕಾರ್ಯ. ಸರ್ಕಾರಿ ಅಧಿಕಾರಿಗಳಿಗೆ ಬದಲಾವಣೆ. ಔಷಧ ವ್ಯಾಪಾರಿಗಳಿಗೆ ಲಾಭ.
ಕುಂಭ: ನೆರೆಹೊರೆಯವರಿಂದ ಪ್ರತಿರೋಧ. ಧಾರ್ವಿುಕ ಕೆಲಸಕ್ಕೆ ಹಣ ವಿನಿಯೋಗ ಮಾಡಲಿದ್ದೀರಿ. ಹೊಸ ಉದ್ಯಮದಿಂದ ಧನಲಾಭ.
ಮೀನ: ಸರ್ಕಾರದಿಂದಾಗಬೇಕಾದ ಕೆಲಸಗಳು ವಿಳಂಬವಾಗುವ ಸಾಧ್ಯತೆ. ನಿರಾಸೆಯ ಮಧ್ಯೆ ಆಸೆಯ ಸೆಲೆಯೊಂದು ಕಂಡುಬರಲಿದೆ.
PublicNext
03/09/2022 07:05 am