ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 26.5.2022

ಮೇಷ: ದುಷ್ಟ ಜನರಿಂದ ದೂರವಿರಿ. ಯತ್ನ ಕಾರ್ಯಗಳಲ್ಲಿ ಜಯ. ಅಲ್ಪ ಧನಾಗಮನ. ದೂರ ಪ್ರಯಾಣ. ಮನಸ್ಸಿಗೆ ಚಿಂತೆ.

ವೃಷಭ: ಬಂಧು ಮಿತ್ರರಲ್ಲಿ ದ್ವೇಷ. ಸಲ್ಲದ ಅಪವಾದ ಬರಬಹುದು. ವ್ಯಾಪಾರದಲ್ಲಿ ಲಾಭ. ಕೋರ್ಟ್ ಕೆಲಸದಲ್ಲಿ ವಿಘ್ನಗಳು.

ಮಿಥುನ: ಅನಿರೀಕ್ಷಿತ ದ್ರವ್ಯಲಾಭ. ದಾಂಪತ್ಯದಲ್ಲಿ ವಿರಸ ಕಾಣಿಸಬಹುದು. ಅಧಿಕ ಖರ್ಚು. ಭೂಲಾಭ. ಸಮಾಜದಲ್ಲಿ ಗೌರವ.

ಕಟಕ: ತಾಯಿಯಿಂದ ಧನಸಹಾಯ. ವಾದ-ವಿವಾದಗಳಲ್ಲಿ ಸೋಲು. ಸ್ಥಳ ಬದಲಾವಣೆ. ಶೀತ ಸಂಬಂಧಿ ರೋಗಗಳ ಸಮಸ್ಯೆ.

ಸಿಂಹ: ಉದ್ಯೋಗದಲ್ಲಿ ಪ್ರಗತಿಯಾದರೂ ದ್ರವ್ಯ ನಷ್ಟ ಸಾಧ್ಯತೆ. ಕೃಷಿಯಲ್ಲಿ ಲಾಭವಾಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ನೆಮ್ಮದಿ.

ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ ತಾಳುವಿರಿ. ದಾಂಪತ್ಯದಲ್ಲಿ ಸುಖ. ಅನಾರೋಗ್ಯ ಕಾಡೀತು. ಪರರಿಂದ ಮೋಸ. ಶತ್ರು ಬಾಧೆ.

ತುಲಾ: ಅನ್ಯ ಜನರಲ್ಲಿ ವೈಮನಸ್ಯ. ಆಪ್ತರನ್ನು ದ್ವೇಷಿಸುವಿರಿ. ದೂರ ಪ್ರಯಾಣ. ಉತ್ತಮ ಬುದ್ಧಿಶಕ್ತಿ ಪ್ರದರ್ಶನ. ಋಣವಿಮೋಚನೆ.

ವೃಶ್ಚಿಕ: ಸ್ತ್ರೀಯಿಂದ ತೊಂದರೆಯಾಗಬಹುದು ಹುಷಾರು. ಮಾನಸಿಕ ಒತ್ತಡ. ಪ್ರೀತಿ ಸಮಾಗಮ. ಆತ್ಮೀಯರಲ್ಲಿ ವಿಶ್ವಾಸ.

ಧನುಸ್ಸು: ಮಹಿಳೆಯರಿಗೆ ಲಾಭ. ಉದ್ಯೋಗದಲ್ಲಿ ಒತ್ತಡ. ಸ್ತ್ರೀಯರಿಂದ ಸಹಾಯ. ಇಷ್ಟ ವಸ್ತು ಖರೀದಿ. ಮಾತಿನಲ್ಲಿ ಹಿಡಿತವಿರಲಿ.

ಮಕರ: ಸಾಧಾರಣ ಲಾಭ. ವಿರೋಧಿಗಳಿಂದ ತೊಂದರೆ. ವ್ಯರ್ಥ ಧನಹಾನಿಯಾದೀತು. ಉದರ ಬಾಧೆ. ಬಾಕಿ ವಸೂಲಿಯಾಗಲಿದೆ.

ಕುಂಭ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ. ಅಧಿಕ ತಿರುಗಾಟ ಮಾಡಲೇಬೇಕಾದ ಸ್ಥಿತಿ. ದೈನಂದಿನ ಕೆಲಸಗಳಲ್ಲಿ ಬದಲಾವಣೆ.

ಮೀನ: ವಿದ್ಯಾರ್ಥಿಗಳಿಗೆ ಶುಭ. ಷೇರು ವ್ಯವಹಾರಗಳಲ್ಲಿ ನಷ್ಟ. ದಾಂಪತ್ಯದಲ್ಲಿ ಕಲಹ. ಆಪ್ತರೊಡನೆ ಕಷ್ಟಗಳನ್ನು ಹೇಳಿಕೊಳ್ಳುವಿರಿ.

Edited By : Nirmala Aralikatti
PublicNext

PublicNext

26/05/2022 07:27 am

Cinque Terre

85.8 K

Cinque Terre

0