ಮೇಷ: ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಕಾರ್ಯನಿರ್ವಹಿಸಿದರೆ ಯಶಸ್ಸು ನಿಮ್ಮದಾಗುವುದು. ಉದ್ಯೋಗದಲ್ಲಿ ಶ್ರಮ ಅಧಿಕ.
ವೃಷಭ: ಬರಹಗಾರರಿಗೆ, ಆಹಾರೋದ್ಯಮಿಗಳಿಗೆ, ಪಾಲುದಾರಿಕಾ ವ್ಯವಹಾರಸ್ಥರಿಗೆ ಅನುಕೂಲಕರ. ಉನ್ನತ ಅಧಿಕಾರಕ್ಕಾಗಿ ಶ್ರಮ.
ಮಿಥುನ: ಸಂಶಯಕ್ಕೆ ಅವಕಾಶ ಕೊಡದೇ ಕಾರ್ಯ ಕ್ಷೇತ್ರದಲ್ಲಿ ಯಶಸ್ಸಿಗೆ ಪ್ರಯತ್ನಿಸಿ. ಸ್ಥಿರವಾದ ಧನಸಂಪತ್ತು. ಆರೋಗ್ಯದತ್ತ ಗಮನಹರಿಸಿ.
ಕಟಕ: ಅಧಿಕ ದೈಹಿಕ ಶ್ರಮ. ಧನಾರ್ಜನೆ. ಅಧ್ಯಯನ, ಉದ್ಯೋಗ, ಸ್ಥಾನ ಗೌರವ ವಿಚಾರದಲ್ಲಿ ಅಭಿವೃದ್ಧಿ. ಚರ್ಚೆಗೆ ಆಸ್ಪದ ಬೇಡ.
ಸಿಂಹ: ದೈಹಿಕ ಮಾನಸಿಕ ಒತ್ತಡವಿದ್ದರೂ ಕಾರ್ವಿುಕ ವರ್ಗ ದವರಿಂದ ಸಹಾಯ ಲಭಿಸಿ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಒದಗುವುದು.
ಕನ್ಯಾ: ಉತ್ತಮ ಧನಾರ್ಜನೆ ಇದ್ದರೂ ವಿಚಾರಿಸಿ ಕಾರ್ಯ ನಿರ್ವಹಿಸಿ. ದಾಕ್ಷಿಣ್ಯ ಪ್ರವೃತ್ತಿ ಸಲ್ಲದು. ಪಾಲುದಾರಿಕಾ ಕ್ಷೇತ್ರದಲ್ಲಿ ಬದಲಾವಣೆ.
ತುಲಾ: ಸ್ವಂತ ಪರಿಶ್ರಮ ಬುದ್ಧಿವಂತಿಕೆಯಿಂದ ಕೂಡಿದ ಕಾರ್ಯ ವೈಖರಿಯಲ್ಲಿ ಸಫಲತೆ. ಗಣ್ಯರಿಂದ ಮನ್ನಣೆ. ಸಾಂಸಾರಿಕ ಸುಖ ವೃದ್ಧಿ.
ವೃಶ್ಚಿಕ: ಧೈರ್ಯ, ಪರಾಕ್ರಮ, ಆತ್ಮಸ್ಥೈರ್ಯದಿಂದ ಕೂಡಿದ ಚಟುವಟಿಕೆ. ಸ್ವಾಭಿಮಾನ ಗುಣದಿಂದ ಗೌರವ. ಸಣ್ಣ ಸಂಚಾರ ಸಂಭವ.
ಧನಸ್ಸು: ಪ್ರಯಾಣದಿಂದ ದೇಹಾಯಾಸ. ದೂರದ ವ್ಯವಹಾರ ಗಳಿಂದ ಧನಾರ್ಜನೆ. ಅಧ್ಯಯನ ಪ್ರವೃತ್ತಿಯವರಿಗೆ ಉತ್ತಮ ವಾತಾವರಣ.
ಮಕರ: ಹಣಕಾಸಿನ ವಿಚಾರದಲ್ಲಿ ಪ್ರಗತಿ. ಚತುರತೆಯಿಂದ ವ್ಯವಹರಿಸುವಿರಿ. ಅನ್ಯರಿಂದ ಸಹಾಯ ನಿರೀಕ್ಷಿಸಬೇಡಿ. ದೇವರನ್ನು ಸ್ಮರಿಸಿ.
ಕುಂಭ: ವ್ಯವಹಾರಗಳಲ್ಲಿ ಅಧಿಕ ಲಾಭವಾದರೂ ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ವಿಚಾರ ತಿಳಿದು ನಿರ್ಣಯಿಸಿ.
ಮೀನ: ಮಾನಸಿಕ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಿ. ಅನಗತ್ಯ ವಿಚಾರಗಳಿಗೆ ಒಲವು ತೋರದಿರಿ. ಧಾರ್ವಿುಕ ವಿಚಾರದಲ್ಲಿ ಆಸಕ್ತಿ.
PublicNext
29/04/2022 07:38 am