ಮೇಷ: ನ್ಯಾಯವಾದಿಗಳಿಗೆ, ಸಾಹಿತಿಗಳಿಗೆ ವಿಶೇಷ ದಿನ. ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ. ಶುಭಕಾರ್ಯಕ್ಕೆ ಚಾಲನೆ.
ವೃಷಭ: ಆಸ್ತಿ ವಿಚಾರದಲ್ಲಿ ಮನಸ್ತಾಪ. ಕೆಲಸದ ಅಧಿಕ ಒತ್ತಡದಿಂದ ಅನಾರೋಗ್ಯ. ಕೃಷಿ ಉಪಕರಣಗಳ ಖರೀದಿಯಲ್ಲಿ ಮೋಸ.
ಮಿಥುನ: ಕೌಟುಂಬಿಕ ಕಿರಿಕಿರಿ. ಸಂಗಾತಿಯೊಡನೆ ವಾದ. ಮಕ್ಕಳ ಸಹಕಾರದಿಂದ ನೆಮ್ಮದಿ. ಗುರುವಿನ ಆರಾಧನೆಯಿಂದ ಉತ್ತಮ ಫಲ.
ಕಟಕ: ಸಂಗಾತಿಯಲ್ಲಿ ಹೆಚ್ಚಿನ ವಿಶ್ವಾಸ ಹೊಂದುವಿರಿ. ದಾಂಪತ್ಯದಲ್ಲಿ ಮಧುರ ಕ್ಷಣ. ದೂರದ ಪ್ರಯಾಣದಿಂದಾಗಿ ಬೇಸರ.
ಸಿಂಹ: ಧಾರ್ವಿುಕ, ಚಿಂತನೆಗಳತ್ತ ಮನಸ್ಸನ್ನು ಹರಿಬಿಡುವಿರಿ. ಸಹೋದ್ಯೋಗಿಗಳೊಂದಿಗೆ ವಿಹಾರ. ಅಧ್ಯಯನ ಶೀಲರಿಗೆ ಯಶಸ್ಸು.
ಕನ್ಯಾ: ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ. ಋಣಸಂದಾಯದ ಸಂತೋಷ. ಹೊಸ ಸಂಬಂಧ, ಗೆಳೆತನಗಳು ಕೂಡಿಬರುವ ಸಾಧ್ಯತೆ.
ತುಲಾ: ನಿಮ್ಮವರಿಂದಲೇ ನಿಮ್ಮ ಬಗ್ಗೆ ಅಪಪ್ರಚಾರ. ಉತ್ತಮ ಅಭಿಪ್ರಾಯಗಳಿಂದಾಗಿ ಮನಸ್ಸಿಗೆ ಹಿತ. ಸ್ನೇಹಿತರ ಭೇಟಿಯ ಸಾಧ್ಯತೆ.
ವೃಶ್ಚಿಕ: ನಿರಾಸೆಯಿಂದ ಹೊರಬನ್ನಿ. ಮುಲಾಜಿಗೆ ಒಳಗಾಗದೇ ವ್ಯವಹರಿಸಿ. ವಿದ್ಯಾರ್ಥಿಗಳಿಗೆ ಸಹಪಾಠಿಗಳಿಂದ ಕಿರಿಕಿರಿ.
ಧನುಸ್ಸು: ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ನಿಮ್ಮ ಯೋಜನೆಗಳ ಬಗ್ಗೆ ಹಿತೈಷಿಗಳೆದುರು ಪ್ರಸ್ತಾಪಿಸಿ. ಗಣಪತಿಯ ಧ್ಯಾನ ಮಾಡಿ.
ಮಕರ: ವೃತ್ತಿ ಕ್ಷೇತ್ರದಲ್ಲಿ ನಿರೀಕ್ಷಿತ ಗುರಿ ಸಾಧನೆ. ಕಾರ್ಯತತ್ಪರತೆಯಿಂದ ಹಿಂಜರಿಯದಿರಿ. ಉನ್ನತಾಧಿಕಾರಿಗಳಿಂದ ಪ್ರಶಂಸೆ.
ಕುಂಭ: ಕುಟುಂಬದ ವಿಷಯದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಎಲ್ಲರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ.
ಮೀನ: ಆಕರ್ಷಕ ವ್ಯಕ್ತಿತ್ವದಿಂದಾಗಿ ಜನಮನ್ನಣೆ. ಪರಿಶ್ರಮಕ್ಕೆ ತಕ್ಕ ಫಲ. ಸಂಗಾತಿಯೊಂದಿಗೆ ವಿರಸ ಸಾಧ್ಯತೆ. ದಿನಾಂತ್ಯದಲ್ಲಿ ಸಿಹಿಸುದ್ದಿ.
PublicNext
01/02/2022 07:18 am