2021ರ ಕೊನೆಯ ಸೂರ್ಯಗ್ರಹಣವು ಶನಿವಾರ, ಡಿಸೆಂಬರ್ 4 ರಂದು ಸಂಭವಿಸಲಿದೆ. ಈ ಗ್ರಹಣ ಸುಮಾರು 4 ಗಂಟೆಗಳ ಕಾಲ ಇರಲಿದೆ. ಸೂರ್ಯಗ್ರಹಣವು ಬೆಳಿಗ್ಗೆ 10:59 ರಿಂದ ಪ್ರಾರಂಭವಾಗಿ ಮಧ್ಯಾಹ್ನ 3:7 ಕ್ಕೆ ಕೊನೆಗೊಳ್ಳುತ್ತದೆ.
ಈ ಸೂರ್ಯಗ್ರಹಣವು ಅಂಟಾರ್ಟಿಕಾ ಮತ್ತು ದಕ್ಷಿಣ ಅಮೇರಿಕಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಜಗತ್ತಿನ ಕೆಲವು ಭಾಗಗಳಿಗೆ ಗೋಚರವಾಗಲಿದೆ.
ಭೂಮಿಯ ಮೇಲ್ಮೈಯಲ್ಲಿ ಸೂರ್ಯಗ್ರಹಣದ ಹಾದಿಯನ್ನು ಪತ್ತೆಹಚ್ಚುವ ನಕ್ಷೆಯನ್ನು ನಾಸಾ ಬಿಡುಗಡೆ ಮಾಡಿದ್ದು, ಇದರ ಆಧಾರದಲ್ಲಿ ಡಿಸೆಂಬರ್ 4 ರ ಸೂರ್ಯಗ್ರಹಣವು ಭಾರತದಿಂದ ಗೋಚರಿಸುವುದಿಲ್ಲ.
PublicNext
03/12/2021 07:18 pm