ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 28.1.2021

ಮೇಷ: ಹಲವು ಒಳಿತಿಗಾಗಿ ಯಾರನ್ನೋ ಯಾಚಿಸುವ ಸಂದರ್ಭ ಎದುರಾಗಿ ಬಂದರೆ ನಿರಾಕರಿಸದಿರಿ. ಮುಂದಕ್ಕೆ ಒಳಿತುಂಟಾಗಲಿದೆ.

ವೃಷಭ: ಕೆಲಸಕ್ಕಾಗಿ ಒದ್ದಾಡುತ್ತಿದ್ದೀರಿ. ಕೃಷಿಭೂಮಿಯ ನಂಟನ್ನು ಬೆಳೆಸಿಕೊಂಡರೆ ಸಫಲರಾಗುವಂಥ ಯೋಗ ನಿಮ್ಮ ಅದೃಷ್ಟದಲ್ಲಿದೆ.

ಮಿಥುನ: ವಿಶೇಷವಾಗಿ ಪಾಲುದಾರಿಕೆಯ ಉದ್ಯಮಗಳಲ್ಲಿ ನೇರವಾದ ಮಾತುಕತೆಗಳಿಂದಲೇ ಅದೃಷ್ಟಶಾಲಿ ಎನಿಸುವಿರಿ. ಶಿವಸ್ತುತಿ ಮಾಡಿ.

ಕಟಕ: ಮನೆ ಕಟ್ಟುವಂತಹ ಅಥವಾ ಕೊಳ್ಳುವಂತಹ ಪ್ರಯತ್ನಗಳಿಗೆ ಹೊಸ ಶಕ್ತಿ ಬಂದೊದಗಲಿದೆ. ದುರ್ಗಾಂಬೆಯನ್ನು ಧ್ಯಾನಿಸಿ.

ಸಿಂಹ: ಬಂಡಾಯ ಮನೋಭಾವದವರಾದ ನೀವು ಪ್ರತಿಭಟಿಸಬಹುದಾದರೂ ತಾಳ್ಮೆ ವಹಿಸಿದರೆ ಜಯವೇ ಉಂಟಾಗಲಿದೆ.

ಕನ್ಯಾ: ಆಡಂಬರದ ಬದುಕಿಗೆ ಮರುಳಾಗುತ್ತಿದ್ದೀರಿ. ಅದನ್ನು ತಿರಸ್ಕರಿಸಿ. ಸರಳವಾದ ಜೀವನದಲ್ಲಿಯೇ ಶಾಂತಿ, ನೆಮ್ಮದಿ ಲಭಿಸುತ್ತದೆ.

ತುಲಾ: ಸ್ವಜನರನ್ನು ಮಾತ್ರ ಮುಂಚೂಣಿಗೆ ತರುವ ಮೇಲಧಿಕಾರಿಗಳನ್ನು ಎದುರಿಸಬಹುದು. ಅಗತ್ಯ ಬೆಂಬಲಗಳು ಒದಗಿಬರಲಿವೆ.

ವೃಶ್ಚಿಕ: ಯಾವುದೋ ಒಂದು ವಿಚಾರಕ್ಕೆ ಮಾತ್ರವೇ ಸೀಮಿತರಾಗುತ್ತಿದ್ದೀರಿ. ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡರೆ ಲಾಭವಿದೆ.

ಧನಸ್ಸು: ದುಡಿದು ಪರಿಶ್ರಮದಿಂದ ಹಣ ಗಳಿಸುವುದರ ಬಗೆಗಿನ ಅರಿವು ಉಂಟಾಗಲಿದೆ. ಕಾರ್ಯಸಿದ್ಧಿಗೆ ಸಹಾಯವನ್ನು ಪಡೆಯುವಿರಿ.

ಮಕರ: ದೊಡ್ಡ ಮಟ್ಟದ ಬಂಡವಾಳ ಹೂಡಿ ವ್ಯಾಪಾರ ನಡೆಸುವ ಯೋಜನೆ ತಪ್ಪೇನಲ್ಲ. ಆದರೆ ತಜ್ಞರ ಸಲಹೆಗಳನ್ನೂ ಪಡೆದುಕೊಳ್ಳಿ.

ಕುಂಭ: ಆತ್ಮೀಯರಾದ ಒಬ್ಬ ಮಿತ್ರರನ್ನು ಬಹಳ ಕಾಲದ ನಂತರ ಭೇಟಿಯಾಗಲಿದ್ದೀರಿ. ಅವರಿಂದ ಒಳಿತಿನ ದಾರಿಗೆ ಮಾರ್ಗದರ್ಶನ ಲಭ್ಯ.

ಮೀನ : ಹಲವರಿಗೆ ಉದ್ಯೋಗ ದೊರಕಿಸಿಕೊಡುವಂತಹ ನಿಮ್ಮ ಯೋಜನೆಗೆ ಹೆಚ್ಚಿನ ಪರಿಶ್ರಮವೂ ಅಗತ್ಯ. ಶೀಘ್ರದಲ್ಲಿಯೇ ಸಫಲತೆ ಸಿಗಲಿದೆ.

Edited By : Nirmala Aralikatti
PublicNext

PublicNext

28/01/2021 07:15 am

Cinque Terre

50.95 K

Cinque Terre

0