ಮೇಷ: ಪ್ರವಾಸದಿಂದ ಪಿತ್ತೋಷ್ಣ ಪರಿಣಾಮದಿಂದ ಆರೋಗ್ಯದಲ್ಲಿ ಏರುಪೇರು ಕಂಡುಬರುವುದು. ಶತ್ರುಗಳ ಕಾಟದಿಂದ ಕಾರ್ಯವೈಫಲ್ಯವಾಗಲಿದೆ. ಮನೆಯಲ್ಲಿ ಧರ್ಮಕಾರ್ಯ ನಡೆದು ಸಮಾಧಾನವಿದೆ.
ವೃಷಭ: ಕಚೇರಿಯಲ್ಲಿಯೂ ನಿಮಗೆ ಅಸಮಾಧಾನ ಕಂಡುಬರಲಿದೆ. ಆದಾಯದಲ್ಲಿ ಹೆಚ್ಚಿನ ವ್ಯತ್ಯಾಸ ಕಾಣದು. ಆದರೆ ವೆಚ್ಚದಲ್ಲಿ ಹಲವು ಸೋರಿಕೆಗಳು ಕಾಣುವುದು. ಎಚ್ಚರಿಕೆಯಂದ ಸಮಸ್ಯೆಯನ್ನು ನಿಭಾಯಿಸಿರಿ.
ಮಿಥುನ: ಸೋದರ ವರ್ಗದಲ್ಲಿ ಆರೋಗ್ಯಕ್ಕೆ ಕುತ್ತು. ನಿಮ್ಮ ಸಹಾಯ ಬಯಸಬಹುದು. ಸಾಲ ನೀಡದಿದ್ದರೆ ಉತ್ತಮ. ತಾಯಿಯ ಆರೋಗ್ಯದ ಚಿಂತೆ ಪದೇ ಪದೇ ಕಾಡಲಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ಕಡಿಮೆ.
ಕರ್ಕ: ಗೃಹೋಪಕರಣಗಳ ಖರೀದಿ ನಡೆದೀತು. ಬೆಳ್ಳಿ, ಬಂಗಾರದ ವ್ಯವಹಾರವು ನಡೆದೀತು. ವಾಹನ ಪತನ ಭಯವಿದೆ. ಆಪ್ತೇಷ್ಟರಲ್ಲಿ ಅಕಾರಣವಾಗಿ ವಿರಸ ಉಂಟಾದೀತು. ಮಾತು ಕಡಿಮೆ ಮಾಡಿರಿ.
ಸಿಂಹ: ನೀವು ಕೈಹಾಕಿದ ಕಾರ್ಯವು ಯಶಸ್ವಿಯಾಗಲಿದೆ. ನಿರೀಕ್ಷೆಗೆ ಮೀರಿ ಬಂಧುಗಳ ಸಹಾಯ ನಿಮಗೆ ದೊರಕಲಿದೆ. ಮಕ್ಕಳ ವಿದ್ಯಾ ಪ್ರಗತಿಯಿಂದ ಹರ್ಷವಾದೀತು. ಧನ ಚಿಂತೆಯು ದೂರವಾಗಲಿದೆ. ಶುಭವಿದೆ.
ಕನ್ಯಾ: ವೃತ್ತಿನಿರತರಿಗೆ ಶ್ಲಾಘನೆ, ಮೇಲಾಧಿಕಾರದ ಪ್ರಾಪ್ತಿಯ ಸುಯೋಗವಿದ್ದೀತು. ಇದ್ದಲ್ಲಿ ಇರಲು ಬಿಡದ ಸಂಚಾರದ ತೊಡಕು ಕಂಡೀತು. ಪತ್ನಿಗೆ ಅನಾರೋಗ್ಯ ಕಂಡುಬಂದೀತು. ಮಿತ್ರರ ವಿರೋಧವಿದ್ದೀತು.
ತುಲಾ: ಮುಂಗೋಪ ಹಾಗೂ ದುಡುಕಿನಿಂದ ಕಾರ್ಯಹಾನಿ ಯಾದೀತು. ಅಶಾಂತಿ ಹೆಚ್ಚಲಿದೆ. ತಾಳ್ಮೆ ಅಗತ್ಯವಿದೆ. ಕಾಲಲ್ಲಿ ಚಕ್ರ ಕಟ್ಟಿಕೊಂಡೇ ಇರುವ ನಿಮಗೀ ವರ್ಷವಿಡೀ ಪ್ರವಾಸ, ಸಂಚಾರ ಕಂಡುಬಂದೀತು.
ವೃಶ್ಚಿಕ: ಗುರುಹಿರಿಯರ ಒಲುಮೆ, ದೇವರ ಅನುಗ್ರಹದ ಸದಾರಕ್ಷೆ ನಿಮಗಿರುವುದರಿಂದ ದುಗುಡ ಸಹ್ಯವೆನಿಸಲಿದೆ. ದೂರ ಪ್ರಯಾಣದಿಂದ ಕಾರ್ಯದಲ್ಲಿ ಜಯವಿದೆ. ವಾಹನದ ಸಮಸ್ಯೆ ಖರ್ಚು ತಂದೀತು.
ಧನು: ಮಗಳ ವಿವಾಹದ ವಿಷಯಕ್ಕಾಗಿ ಓಡಾಟ ತಂದೀತು. ಆದರೆ ಕಾರ್ಯಸಿದ್ಧಿಯಾಗಲಿದೆ. ದೇವತಾ ಅನುಗ್ರಹಕ್ಕಾಗಿ ಜಪತಪಾನುಷ್ಠಾನ ನಡೆಯಲಿದೆ. ಮಕ್ಕಳ ವಿದ್ಯಾ ಪ್ರಗತಿಯಿಂದ ಸಂತಸವಾಗಲಿದೆ.
ಮಕರ: ವ್ಯವಹಾರದಲ್ಲಿ ಬಂಧು ಸಹಾಯವು ಒದಗಿ ಬರಲಿದೆ. ಯಾತ್ರೆ, ಪ್ರವಾಸಾದಿಗಳು ಹರ್ಷ ತರಲಿದೆ. ನೆನೆಗುದಿಗೆ ಬಿದ್ದಿದ್ದ ನ್ಯಾಯಾಲಯದ ವಿವಾದವು ರಾಜಿಯಲ್ಲಿ ಮುಕ್ತಾಯ ಕಾಣಲಿದೆ. ನಟನೆಯವರಿಗೆ ಜಯ.
ಕುಂಭ: ಧಾನ್ಯ, ಸಿಹಿ ಪದಾರ್ಥಗಳ ವ್ಯಾಪಾರೋದ್ಯಮಿಗಳಿಗೆ ಹೆಚ್ಚು ಲಾಭದ ಗಳಿಕೆಯಿದೆ. ಕ್ರೀಡೆ, ರಕ್ಷಣೆ ಹಾಗೂ ಚಿಕಿತ್ಸಾ ಕ್ಷೇತ್ರದವರಿಗೆ ಅಪವಾದ ಭಯವಿದ್ದೀತು. ಶಿಕ್ಷಣ ಕ್ಷೇತ್ರದವರಿಗೆ ಅಧಿಕ ಕಾರ್ಯ ಲಾಭ ಅಲ್ಪ.
ಮೀನ: ಮಾತನ್ನು ಕಡಿಮೆ ಮಾಡಿರಿ. ಇಲ್ಲದಿದ್ದಲ್ಲಿ ನಿಮ್ಮ ಬಗ್ಗೆ ಅಪಾರ್ಥ ಜಾಸಿಯಾದೀತು. ಅಲರ್ಜಿಯಂತಹವು ಮತ್ತೆ ಕಾಡಲಿದೆ. ಆರೋಗ್ಯ ಹಾನಿ, ಮಕ್ಕಳ ವಿವಾಹದ ಚಿಂತೆ ನಿಮ್ಮನ್ನು ಹಣ್ಣು ಮಾಡಲಿದೆ.
PublicNext
21/01/2021 08:54 am