ಅಹಮದಾಬಾದ್ : ಮುಂಬೈನಿಂದ ಗಾಂಧಿನಗರಕ್ಕೆ ಹೋಗುತ್ತಿದ್ದ ವಂದೇ ಭಾರತ್ ರೈಲು ನಿನ್ನೆ ಅಪಘಾತವಾಗಿತ್ತು.ಹೌದು ಎಮ್ಮೆಗಳ ಹಿಂಡಿಗೆ ಡಿಕ್ಕಿಯಾಗಿ ರೈಲು ನುಜ್ಜುಗುಜ್ಜಾಗಿತ್ತು. ಇನ್ನು ಎಮ್ಮೆ ಡಿಕ್ಕಿಯಿಂದ ರೈಲಿನ ಮುಂಭಾಗಕ್ಕೆ ಹಾನಿಯಾಗಿತ್ತು. ಇನ್ನು ಘಟನೆ ನಡೆದ 24 ಗಂಟೆಯಲ್ಲಿ ರೈಲನ್ನು ದುರಸ್ತಿ ಮಾಡಲಾಗಿದೆ.
ಇನ್ನು ರೈಲುಗಳು ಜಾನುವಾರುಗಳ ಸಮಸ್ಯೆ ಎದುರಿಸುವಂತೆ ರೈಲುಗಳನ್ನು ವಿನ್ಯಾಸಗೊಳಿಸಾಗಿತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಸದ್ಯ ಎಮ್ಮೆಗಳ ಮಾಲೀಕರ ವಿರುದ್ಧ ಗುಜರಾತ್ ನ ರೈಲ್ವೆ ರಕ್ಷಣಾ ಪಡೆ (ಆರ್ ಪಿಎಫ್) ಪ್ರಕರಣ ದಾಖಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಮ್ಮೆಗಳಿಗೆ ಡಿಕ್ಕಿ ಹೊಡೆದ ನಂತರ ಹಾನಿಗೊಳಗಾದ ಸೆಮಿ-ಹೈ ಸ್ಪೀಡ್ ರೈಲಿನ ಡ್ರೈವರ್ ಕೋಚ್ ನ ನೋಸ್ ಕೋನ್ ಕವರ್ ಅನ್ನು ಮುಂಬೈನಲ್ಲಿ ಸಂಪೂರ್ಣವಾಗಿ ಬದಲಾವಣೆ ಮಾಡಲಾಗಿದೆ ಎಂದು ಪಶ್ಚಿಮ ರೈಲ್ವೆ (ಡಬ್ಲ್ಯುಆರ್) ಹೇಳಿಕೆಯಲ್ಲಿ ತಿಳಿಸಿದೆ.
PublicNext
07/10/2022 05:30 pm