ವರದಿ - ಗೀತಾಂಜಲಿ
ಚಿಕ್ಕೋಡಿ: ರಸ್ತೆಯಲ್ಲಿ ಸಂಚರಿಸುತ್ತಿದ್ದ ಮಾರುತಿ ಓಮಿನಿ ವ್ಯಾನ್‌ಗೆ ಬೆಂಕಿ ಹೊತ್ತಿಕೊಂಡು ನಡುರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಚಿಕ್ಕೋಡಿ ನಗರದಲ್ಲಿ ನಡೆದಿದೆ. ನಗರದ ಬಸ್ ನಿಲ್ದಾಣ ಹತ್ತಿರ ಸಂಚರಿಸುತ್ತಿದ್ದ ಮಾರುತಿ ಓಮಿನಿ ವ್ಯಾನ್‌ನಲ್ಲಿ ಆಕಸ್ಮಿಕ ವಾಗಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಓಮಿನಿ ಚಾಲಕ ವಾಹನವನ್ನು ಬಿಟ್ಟು ಹೊರಗೆ ಬಂದಿದ್ದಾನೆ.
ಓಮಿನಿ ವಾಹನದಲ್ಲಿ ಚಾಲಕನ ಹೊರತುಪಡಿಸಿ ಬೇರೆ ಯಾರು ಇದ್ದಿರಲಿಲ್ಲ ಚಾಲಕ ಹೊರಗಡೆ ಓಡಿ ಬಂದಿರುವುದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದರು.
PublicNext
05/08/2022 07:50 pm