ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪ್ಲಾಸ್ಟಿಕ್ ತ್ಯಾಜ್ಯ ಹೇರಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿ

ಮಂಗಳೂರು: ಪಚ್ಚನಾಡಿ ಡಂಪಿಂಗ್ ಯಾರ್ಡ್ ನಿಂದ ಪ್ಲಾಸ್ಟಿಕ್ ತ್ಯಾಜ್ಯ ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಕುಡುಪು ಬಳಿಯ ತಿರುವಿನಲ್ಲಿ ಪಲ್ಟಿಯಾದ ಘಟನೆ ಇಂದು ಸಂಭವಿಸಿದೆ.

ಪಚ್ಚನಾಡಿಯಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೇರಿಕೊಂಡು ಕಲಬುರಗಿ ಕಡೆ ಈ ಲಾರಿ ಪ್ರಯಾಣಿಸುತ್ತಿತ್ತು. ಆದರೆ ಕುಡುಪು ಬಳಿಯ ತಿರುವಿನಲ್ಲಿ ಲಾರಿ ಏಕಾಏಕಿ ಪಲ್ಟಿಯಾಗಿ ರಸ್ತೆಗುರುಳಿದೆ. ಪರಿಣಾಮ ಲಾರಿಯಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯವು ರಸ್ತೆಯಲ್ಲಿ ಚೆಲ್ಲಿದೆ. ಘಟನೆಯಲ್ಲಿ ಚಾಲಕ ಹಾಗೂ ನಿರ್ವಾಹಕ ಯಾವುದೇ ತೊಂದರೆಗಳಿಲ್ಲದೆ ಪಾರಾಗಿದ್ದಾರೆ.

Edited By : Nagesh Gaonkar
PublicNext

PublicNext

02/07/2022 09:47 pm

Cinque Terre

95.75 K

Cinque Terre

0

ಸಂಬಂಧಿತ ಸುದ್ದಿ