ಗದಗ: ಲಾರಿ ಮತ್ತು ಎರಡು ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸವಾರರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಬೆಣ್ಣಿಹಳ್ಳದ ಬಳಿ ನಡೆದಿದೆ.
ಪ್ರಕಾಶ್ (40) ಹಾಗೂ ಫಕೀರಪ್ಪ (38) ಮೃತ ದುರ್ದೈವಿಗಳು. ಇನ್ನಿಬ್ಬರು ಬೈಕ್ ಸವಾರರಿಗೆ ಗಂಭೀರ ಗಾಯವಾಗಿದೆ. ಲಾರಿ ಓವರ್ ಟೇಕ್ ಮಾಡಲು ಹೋಗಿ ಲಾರಿ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾರೆ.
ಮುಂಡರಗಿಯಿಂದ ಕೊರ್ಲಹಳ್ಳಿ ಕಡೆ ಹೊರಟಿದ್ದ ಲಾರಿಯನ್ನು ಓವರ್ ಟೇಕ್ ಮಾಡಲು ಹೋದಾಗ ಮುಂದಿನಿಂದ ಇನ್ನೊಂದು ಬೈಕ್ ಬಂದಿದೆ. ಎರಡೂ ಬೈಕ್ಗಳು ಪರಸ್ಪರ ಡಿಕ್ಕಿಯಾದ ರಭಸಕ್ಕೆ ಇಬ್ಬರು ಬೈಕ್ ಸವಾರರು ಲಾರಿ ಚಕ್ರದಡಿಗೆ ಸಿಲುಕಿದ್ದಾರೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
06/06/2022 05:22 pm