ಹಾವೇರಿ : ಬೇಸಿಗೆ ಧಗೆ ಕಾರಣ ನದಿಗೆ ಗೆಳೆಯರೊಡನೆ ಈಜಲು ಹೋಗಿದ್ದ ಇಬ್ಬರು ಯುವಕರು ಜಲಸಮಾಧಿಯಾದ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಒಟ್ಟು ಐವರು ಈಜಲು ತೆರಳಿದವರ ಪೈಕಿ ಇಬ್ಬರು ಧಾರುಣ ಅಂತ್ಯ ಕಂಡಿದ್ದಾರೆ. 14 ವರ್ಷದ ನಿಖಿಲ್ ಕಿಲಾರಿ, ಮತ್ತೊಬ್ಬ 14 ವರ್ಷದ ಸಂಜಯ್ ಚಳಗೇರಿ ಮೃತ ಬಾಲಕರಾಗಿದ್ದಾರೆ.
ಮೃತರು ತಾಲೂಕಿನ ಮಾಸೂರು ಗ್ರಾಮದ ನಿವಾಸಿಗಳಾಗಿದ್ದು ಶಾಲೆಗೆ ರಜೆ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನ ಕುಮದ್ವತಿ ನದಿಯಲ್ಲಿ ಈಜಾಡಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.
ಸದ್ಯ ನಿಖಿಲ್ ಮೃತದೇಹ ಪತ್ತೆಯಾಗಿದ್ದು ಸಂಜಯ ಶವಕ್ಕಾಗಿ ಶೋಧ ಮುಂದುವರೆದಿದೆ. ಸ್ಥಳಕ್ಕೆ ಆಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಹಿರೆಕೇರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
PublicNext
25/04/2022 09:11 pm