ವಿಜಯನಗರ: ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಮನೆಯೊಂದು ಹೊತ್ತಿ ಉರಿದಿದೆ. ಎಸಿ ಸ್ಪೋಟದಿಂದಲೇ ಈ ಒಂದು ದುರಂತ ಸಂಭವಿಸಿದೆ. ಇದರ ಪರಿಣಾಮ ಪತಿ-ಪತ್ನಿ ಮತ್ತು ಮಕ್ಕಳಿಬ್ಬರು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ವಿಜನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ.
ತಡರಾತ್ರಿ ನಡೆದ ಈ ದುರಂತದಲ್ಲಿ ವೆಂಕಟ್ ಪ್ರಶಾಂತ್ (42) ಪತ್ನಿ ಡಿ.ಚಂದ್ರಕಲಾ (38) ಮಕ್ಕಳಾದ ಎಚ್.ಎ. ಅರ್ದ್ವಿಕ್ (16) ಹಾಗೂ ಪ್ರೇರಣಾ (8) ಮನೆಯಿಂದ ಹೊರಗಡೆ ಬರಲಾಗದೇ ಮನೆಯೊಳಗೇನೆ ಮೃತಪಟ್ಟಿದ್ದಾರೆ.
ರಾಘವೇಂದ್ರ ಶೆಟ್ಟಿ ಅನ್ನೋರ ಮನೆಯಲ್ಲಿ ನಡೆದ ಈ ಘಟನೆಯಲ್ಲಿ ರಾಘವೇಂದ್ರ ಶೆಟ್ಟಿ ಮತ್ತು ಅವರ ಪತ್ನಿ ರಾಜಶ್ರೀ ಅವರು ಹೊರಗೆ ಓಡಿ ಬಂದು ಬಚಾವ್ ಆಗಿದ್ದಾರೆ. ಮೃತ ದೇಹಗಳನ್ನ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
PublicNext
08/04/2022 12:18 pm