ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಕ್‌ಗೆ ಲಾರಿ ಡಿಕ್ಕಿ-ಗರ್ಭಿಣಿ ಮಹಿಳೆ ಸ್ಥಳದಲ್ಲೇ ಸಾವು

ಮಂಡ್ಯ: ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ತಾಲೂಕು ಕಿಕ್ಕೇರಿಯಲ್ಲಿ ಸಂಭವಿಸಿದೆ.

ಮಾಚಗೋನಹಳ್ಳಿಯ ಗರ್ಭಿಣಿ ಸಹನಾ ಮೃತ ದುರ್ದೈವಿ. ಪತಿ ಸಂದೀಪ್ ಜೊತೆಗೆ ಚನ್ನರಾಯಪಣ್ಣಕ್ಕೆ ಬೈಕ್ ಮೇಲೆ ಸಹನಾ ತೆರಳುತ್ತಿದ್ದರು.

ಈ ವೇಳೆ ಹಿಂಬದಿಯಿಂದ ಬಂದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಸಹನಾ ಬೈಕ್‌ ನಿಂದ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ಲಾರಿ ಚಕ್ರ ಸಹನಾ ಮೇಲೆ ಹರಿದು ಹೋಗಿದೆ. ಆ ಕೂಡಲೇ ಸಹನಾ ಮೃತಪಟ್ಟಿದ್ದಾರೆ.

ಕಣ್ಣೆದುರೇ ಪತ್ನಿ ಮೃತಪಟ್ಟದನ್ನ ಕಂಡ ಪತಿ ಅತೀವ ದುಃಖದಲ್ಲಿಯೇ ಇದ್ದಾರೆ. ಸ್ಥಳಕ್ಕೆ ಕಿಕ್ಕೇರಿ ಠಾಣಾ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.

Edited By :
PublicNext

PublicNext

30/01/2022 05:40 pm

Cinque Terre

40.38 K

Cinque Terre

3

ಸಂಬಂಧಿತ ಸುದ್ದಿ