ಮಂಡ್ಯ: ಬಸ್ ಮತ್ತು ಕಾರು ಮುಖಾ-ಮುಖಿ ಡಿಕ್ಕಿ ಆದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ಮಂಡ್ಯದ ಕೆಂಪನಕೊಪ್ಪಲು ಗೇಟ್ ಬಳಿ ಸಂಭವಿಸಿದೆ.
ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಗೆ ಕಾರು ಡಿಕ್ಕಿ ಆಗಿದೆ. ಇದರಿಂದ ಸೋಮವಾರಪೇಟೆಯ ಸುದೀಪ್,ಶ್ರೀಜಾ ಮತ್ತು ತಂಗಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 15 ವರ್ಷದ ಹುಡುಗಿಯ ಸ್ಥಿತಿ ಚಿಂತಾಜನಕವಾಗಿಯೇ ಇದೆ.
ಬಸ್‌ನಲ್ಲಿ ಇದ್ದ ಚಾಲಕರು ಮತ್ತು ನಾಲ್ವರು ಪ್ರಯಾಣಿಕರಿಗೆ ತೀವ್ರ ಗಾಯವಾಗಿವೆ. ಆದಿಚುಂಚನಗಿರಿ ಬಿಜಿಎಸ್ ಆಸ್ಪತ್ರೆಗೆ ಈಗ ಇವರನ್ನ ದಾಖಲಿಸಲಾಗಿದೆ.
PublicNext
02/01/2022 10:23 pm