ಚಿಕ್ಕಮಗಳೂರು:ಅಗ್ನಿಶಾಮಕ ದಳದ ವಾಹನ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಹಿಂಬದಿ ಕುಳಿತ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕೊಪ್ಪದ ದ್ಯಾವೇಗೌಡ ವೃತ್ತದಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನ ಮುಮ್ತಾಜ್ (46) ಎಂದು ಗುರುತಿಸಲಾಗಿದೆ.
ಸ್ಕೂಟಿಯ ಹಿಂಬದಿಯಲ್ಲಿ ಕುಳಿತಿದ್ದ ಮುಮ್ತಾಜ್ ಗೆ ಅಗ್ನಿಶಾಮಕ ದಳದ ವಾಹನ ಡಿಕ್ಕಿ ಹೊಡೆದಿದೆ.ಇದರಿಂದ ವಾಹನ ತಲೆ ಮೇಲೆ ಹರಿದು ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
PublicNext
18/12/2021 02:28 pm