ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
ಯಾದಗಿರಿ: ವಿದ್ಯುತ್ ತಂತಿ ತಗಲಿ ಪೌರಕಾರ್ಮಿಕ ಸಾವನ್ನಪ್ಪಿರುವ ಘಟನೆ ಯಾದಗಿರಿ ನಗರಸಭೆಯ ವ್ಯಾಪ್ತಿಯ ಕೋಟಗಾರ ವಾರ್ಡನಲ್ಲಿ ನಡೆದಿದೆ.
ನಗರಸಭೆಯ ವ್ಯಾಪ್ತಿಯ ಕೋಟಗಾರ ವಾರ್ಡ ನಂಬರ್ 11ರ ನಗರೋತ್ಥಾನ ಪೇಸ್ ಯೋಜನೆಯಡಿಯಲ್ಲಿ 500 ಮೀಟರ್ ಸಿಸಿ ರಸ್ತೆ ಕಾಮಗಾರಿಯನ್ನ ಎಸ್ ಆರ್ ಕನಸ್ಟ್ರಕ್ಷನ್ ಫರ್ಮ್ ನೇತೃತ್ವದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು.
ಪೌರಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮಣ್ಣ (54) ತಂದೆ ಭೀಮಶಪ್ಪ ದೋರನಳ್ಳಿಗೆ ಹಠಾತ್ತನೆ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾನೆ .
ನಗರಸಭೆ ಪೌರಕಾರ್ಮಿಕ ರಾಮಣ್ಣ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿರುವುದಕ್ಕೆ ನಗರಸಭೆ ಹಾಗೂ ಜೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷವೆ ಮೂಲ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
17/11/2021 03:52 pm