ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಸಾವಿನ ಹಾಟ್ ಸ್ಪಾಟ್ ಆಯಿತಾ ಭೀಷ್ಮ ಕೆರೆ : ಭದ್ರತೆ ವೈಫಲ್ಯ : ಸರಣಿ ಆತ್ಮಹತ್ಯೆ

ಗದಗ: ಮುದ್ರಣ ಕಾಶಿ ಗದಗ ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಭೀಷ್ಮ ಕೆರೆ ಡೆತ್ ಸ್ಪಾಟ್ ಆಗಿ ಬದಲಾಗಿದೆ. ಹೌದು, ಈಗಾಗಲೇ ಹಲವಾರು ಜನ ಭೀಷ್ಮ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೆ, ಇಂದೂ ಸಹ ಓರ್ವ ಶಿಕ್ಷಕನೊಬ್ಬ ಭೀಷ್ಮ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಅನ್ನೋ ಶಂಕೆ ವ್ಯಕ್ತವಾಗಿದೆ.

ನಗರದ ಹುಡ್ಕೊ ಕಾಲೋನಿ ನಿವಾಸಿ ಶರಣಪ್ಪ ಸಂಗಮ್ (37) ಅನ್ನುವಾತನ ಶವ ಭೀಷ್ಮ ಕೆರೆ ದಡದಲ್ಲಿ ಪತ್ತೆಯಾಗಿದ್ದು ನಗರದ ಮಾಡರ್ನ್ ಸ್ಕೂಲ್ ನಲ್ಲಿ ಶರಣಪ್ಪ ಹಿಂದಿ ಶಿಕ್ಷಕನಾಗಿದ್ದ ಎನ್ನಲಾಗಿದೆ.

ಅಲ್ಲದೇ ಫೈನಾನ್ಸ್ ವ್ಯವಹಾರವನ್ನೂ ಶಿಕ್ಷಕ ಶರಣಪ್ಪ ಸಂಗಮ್ ಮಾಡಿಕೊಂಡಿದ್ದ ಹಿನ್ನೆಲೆ ಹಣಕಾಸಿನ ವಿಚಾರಕ್ಕೆನಾದ್ರೂ ಈ ಆತ್ಮಹತ್ಯೆ ನಡೆದಿರಬಹುದಾ ಅನ್ನೋ ಅನುಮಾನ ದಟ್ಟವಾಗಿದೆ.

ಆದರೆ ಇನ್ನೂ ಕೂಡ ಆತ್ಮಹತ್ಯೆ‌ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು ಕೆರೆ‌ ಸುತ್ತಲೂ ಯಾವುದೇ ಸುರಕ್ಷತಾ ಕ್ರಮಗಳಿಲ್ಲದಿರುವದೇ ಇಂಥಹ ಸಾವಿನ ಘಟನೆಗಳಿಗೆ ಭೀಷ್ಮ‌ ಕೆರೆ ಸಾಕ್ಷಿಯಾಗಿದೆ ಅಂತ ನಾಗರೀಕರು ಆರೋಪಿಸಿದ್ದಾರೆ. ಹೀಗಾಗಿ ಕೆರೆಯ ಸುತ್ತಲೂ ತಂತಿ ಬೇಲಿ ಸೇರಿದಂತೆ ಸೂಕ್ತ ಭದ್ರತೆ ಒದಗಿಸಬೇಕು ಅಂತಾ ಸಾರ್ವಜನಿಕರ ಒತ್ತಾಯಿಸಿದ್ದಾರೆ.

Edited By : Manjunath H D
PublicNext

PublicNext

26/10/2021 06:34 pm

Cinque Terre

60.63 K

Cinque Terre

1

ಸಂಬಂಧಿತ ಸುದ್ದಿ