ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೋಸ್ತನನ್ನು ಕಾಪಾಡಲು ಮುಂದಾದ ಗೆಳೆಯರು ಜಲಸಮಾಧಿ

ಕೊಪ್ಪಳ: ಸ್ನೇಹಿತನ್ನು ಕಾಪಾಡಲು ಮುಂದಾದ ಗೆಳೆಯರಿಬ್ಬರು ಜಲಸಮಾಧಿಯಾದ ಹೃದಯವಿದ್ರಾವಕ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ಸಾಣಾಪುರ ಗ್ರಾಮದ ಕೆರೆಯಲ್ಲಿ ನಡೆದಿದೆ. ರಾಜೇಶ್ ಕುಮಾರ್(26) ಮತ್ತು ಮಧುಕಿರಣ್ (25) ಮೃತರು. ಇವರು ಹೈದ್ರಾಬಾದ್ ಮೂಲದವರಾಗಿದ್ದು, ಗಂಗಾವತಿಯ ಅಗ್ನಿಶಾಮಕ ದಳದ ಸಿಬ್ಬಂದಿ.

ಪ್ರವಾಸಕ್ಕೆ ಬಂದಿರುವ ನಾಲ್ವರು ಯುವಕರು ಸಾಣಾಪುರ ಕೆರೆ ದಡದ ಮೇಲೆ ಸ್ನಾನಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ನಾಲ್ವರ ಪೈಕಿ ಅಲೋಕ್ ಕುಮಾರ್ ಮಾತ್ರ ಕೆರೆಯಲ್ಲಿ ಈಜಲು ಹೋಗಿದ್ದ ಇನ್ನೂಳಿದ ಮೂವರು ಕೆರೆ ದಡದ ಬಂಡೆಯ ಮೇಲೆ ಕುಳಿತು ಸ್ನಾನ ಮಾಡುತ್ತಿದ್ದರು.

ಬಂಡೆಯ ಮೇಲೆ ಕುಳಿತು ಸ್ನಾನ ಮಾಡುತ್ತಿದ್ದ ಮೂವರಲ್ಲಿ ನರಸಿಂಹ ಎಂಬಾತ ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದಾನೆ. ನರಸಿಂಹ ಬಿಳುತ್ತಿದ್ದಂತೆ ಆತನನ್ನು ಕಾಪಡಲು ಈಜು ಬಾರದ ರಾಜೇಶ್ ಮತ್ತು ಮಧು ಕಿರಣ ಕೆರೆಗೆ ಹಾರಿದ್ದಾರೆ. ಇದನ್ನು ನೋಡಿದ ಅಲೋಕ್ ಮೂವರನ್ನು ಕಾಪಾಡಲು ಮುಂದಾಗಿದ್ದಾನೆ ಆದರೆ ವಿಧಿಯಾಟ ಕಾಲು ಜಾರಿ ಬಿದ್ದ ನರಸಿಂಗ್ ನನ್ನು ಮಾತ್ರ ಅಲೋಕ್ ಕಾಪಾಡಲು ಸಾಧ್ಯವಾಯಿತು.

ಇನ್ನಿಬ್ಬರು ಸ್ನೇಹಿತರು ಈಜು ಬಾರದೆ ಕೆರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
PublicNext

PublicNext

18/10/2021 10:47 pm

Cinque Terre

85.5 K

Cinque Terre

2

ಸಂಬಂಧಿತ ಸುದ್ದಿ