ದಾವಣಗೆರೆ: ಜಗಳೂರು ಪಟ್ಟಣದ ಶರಣಬಸವೇಶ್ವರ ಬಡಾವಣೆಯಲ್ಲಿ ಸಿಲಿಂಡರ್ ಪೈಪ್ ಲೀಕ್ ಆಗಿ ಅಗ್ನಿ ಅವಘಡ ಸಂಭವಿಸಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಗ್ಯಾಸ್ ಸ್ಟೌವ್ ಗೆ ಅಳವಡಿಸಿದ್ದ ಸಿಲಿಂಡರ್ ಪೈಪ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ದುರ್ಘಟನೆ ನಡೆದಿದೆ. 35 ವರ್ಷದ ಗೀತಾ ಎಂಬ ಮಹಿಳೆಯೇ ಗಾಯಗೊಂಡವರು. ಆಕೆಯನ್ನು ಜಗಳೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಗ್ಯಾಸ್ ಆನ್ ಮಾಡುವಾಗ ಈ ದುರ್ಘಟನೆ ಸಂಭವಿಸಿದ್ದು, ಏಕಾಏಕಿ ಹೊತ್ತಿಕೊಂಡ ಬೆಂಕಿ ಮಹಿಳೆಯನ್ನ ಆವರಿಸಿತ್ತು. ಬಳಿಕ ಬೆಂಕಿ ನಂದಿಸಿ ಆಕೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
PublicNext
22/09/2021 04:36 pm