ಜೈಪುರ: ಹಲವು ವರ್ಷಗಳಿಂದ ಹಾವುಗಳನ್ನು ರಕ್ಷಣೆ ಮಾಡಿ, ಸುರಕ್ಷಿತವಾಗಿ ಕಾಡಿಗೆ ಬಿಡುವ ಮೂಲಕ ರಾಜಸ್ಥಾನದ ಹಾವಿನ ಮನುಷ್ಯ ಎಂದೇ ಖ್ಯಾತಿ ಪಡೆದಿದ್ದ ವಿನೋದ್ ತಿವಾರಿ ಕೊನೆಗೆ ಹಾವು ಕಡಿತದಿಂದಲೇ ದುರಂತ ಸಾವಿಗೀಡಾಗಿದ್ದಾರೆ.
ವಿನೋದ್ ತಿವಾರಿ (45) ಅವರು ಚುರು ಜಿಲ್ಲೆಯ ನಿವಾಸಿ. ಸುಮಾರು 20 ವರ್ಷಗಳಿಂದ ಉರಗ ರಕ್ಷಣೆಯಲ್ಲಿ ತೊಡಗಿದ್ದರು. ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಹಾವುಗಳನ್ನು ರಕ್ಷಣೆ ಮಾಡಿ, ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಹೆಗ್ಗಳಿಕೆ ವಿನೋದ್ ತಿವಾರಿ ಅವರಿಗಿದೆ. ಈ ಕಾರಣದಿಂದಲೇ ಅವರನ್ನು ರಾಜಸ್ಥಾನದ ಹಾವಿನ ಮನುಷ್ಯ ಎಂದು ಕರೆಯಲಾಗುತ್ತದೆ.
ಇದೀಗ ಹಾವಿನಿಂದಲೇ ಮೃತಪಟ್ಟಿರುವುದು ದುರಂತದ ಸಂಗತಿಯಾಗಿದೆ. ಶನಿವಾರ ಬೆಳಗ್ಗೆ ಚುರು ಜಿಲ್ಲೆಯ ಗೊಗಮೆಡಿ ಏರಿಯಾದಲ್ಲಿರುವ ಅಂಗಡಿಯೊಂದರ ಹೊರಭಾಗದಲ್ಲಿ ತಿವಾರಿ ಅವರು ವಿಷಕಾರಿ ನಾಗರಹಾವನ್ನು ಹಿಡಿದು, ಅದನ್ನು ಬ್ಯಾಗ್ ಒಳಗೆ ಹಾಕುವಾಗ ಹಾವು ತಿವಾರಿಯ ಕೈಬೆರಳಿಗೆ ಕಡಿದಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿಯೂ ಸೆರೆಯಾಗಿದೆ.
PublicNext
14/09/2022 06:58 pm