ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಯ ಹುಟ್ಟಿಸುವ ಬಸ್-ಬೈಕ್ ಅಪಘಾತ : ವಿಡಿಯೋ ವೈರಲ್

ಡ್ರೈವಿಂಗ್ ಬರುತ್ತದೆ ಎಂಬ ಕಾರಣಕ್ಕೆ ಬೇಕಾಬಿಟ್ಟಿ ಸಾಗಿದರೆ ಆಗುವುದು ಅನಾಹುತವೇ ಎಂಬುವುದಕ್ಕೆ ಈ ವಿಡಿಯೋನೇ ಸಾಕ್ಷಿ…

ಸದ್ಯ ಬೈಕ್ ಸವಾರನೊಬ್ಬ ಬಸ್ ನಡಿಗೆ ಬಿದ್ದರೂ ಕೂದಲೆಳೆ ಅಂತರದಿಂದ ಪಾರಾಗಿದ್ದಾನೆ. ಹೌದು ಬೈಕ್ ಸವಾರನೊಬ್ಬ ಬಸ್ ಅನ್ನು ಎಡಬದಿಯಿಂದ ಓವರ್ ಟೇಕ್ ಮಾಡಲು ಯತ್ನಿಸುವ ದೃಶ್ಯದಲ್ಲಿ ಬೈಕ್ ಸವಾರ ಸನಿಹಕ್ಕೆ ಬರುತ್ತಿದ್ದಂತೆಯೇ ಬಸ್ ಚಾಲಕರು ಬ್ರೇಕ್ ಹಾಕುತ್ತಾರೆ.

ಅಷ್ಟರಲ್ಲಿ ಬೈಕ್ ಬಸ್ ನಡಿಗೆ ಬಿದ್ದಾಗಿರುತ್ತದೆ. ಈ ದೃಶ್ಯ ಕಂಡ ಎಲ್ಲರೂ ಬೈಕ್ ಸವಾರನ ಸತ್ತೆ ಹೋದ ಎಂದುಕೊಂಡಿದ್ದರು ಆದರೆ ಆತನ ಆಯುಷ್ಯ ಗಟ್ಟಿಯಾಗಿದೆ.

ಗುಜರಾತ್ ನ ಪ್ರಮುಖ ಜಿಲ್ಲಾ ಕೇಂದ್ರ ದಾಹೋಡ್ ನಲ್ಲಿ ನಡೆದ ಘಟನೆ ಇದಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು ನೆಟ್ಟಿಗರು ಬೈಕ್ ಸವಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Edited By : Manjunath H D
PublicNext

PublicNext

16/09/2021 03:58 pm

Cinque Terre

94.39 K

Cinque Terre

5

ಸಂಬಂಧಿತ ಸುದ್ದಿ