ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೃಹಸ್ಥಾಶ್ರಮಕ್ಕೆ ಕಾಲಿಡಬೇಕಾಗಿದ್ದ ವರ ಸೇರಿ 6 ಮಂದಿ ಸಾವು

ಭೋಪಾಲ್ : ಕೆಲವು ಸಂದರ್ಭಗಳಲ್ಲಿ ನಾವು ಊಹಿಸದ ರೀತಿಯಲ್ಲಿ ಸಾವು ನಮ್ಮನ್ನು ಹುಡುಕಿ ಬಂದು ಬಿಡತ್ತೆ ಇದರ ಕೈಯಿಂದ ತಪ್ಪಿಕೊಳ್ಳುವುದು ತೀರಾ ಕಷ್ಟ.

ಹಾಗಾಗಿಯೇ ದಿನಬೆಳಗಾದ್ರೆ ಅಪಘಾತದ ಸುದ್ದಿಗಳು ನಮ್ಮನ್ನಾ ಬೆಚ್ಚಿಬಿಳಿಸುತ್ತವೆ.

ಇಲ್ಲಿ ಟ್ರಾಕ್ಟರ್ ಚಾಲಕ ನಿದ್ರೆಗೆ ಜಾರಿದ ಪರಿಣಾಮ ಟ್ರಾಲಿ ಉರುಳಿ ಬಿದ್ದು ಮದುವೆಯಾಗ ಬೇಕಿದ್ದ ವರ ಸೇರಿದಂತೆ 6 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮದುವೆ ಸಮಾರಂಭಕ್ಕಾಗಿ ಜನರನ್ನು ಕರೆದುಕೊಂಡು ಹೋಗುತ್ತಿದ್ದ ಟ್ರಾಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿದೆ.

ಈ ಕಾರಣದಿಂದ ವರ ಸಾವನ್ನಪ್ಪಿದ್ದಾನೆ. ಇನ್ನೂ ಅನೇಕ ಜನರು ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಹಲವರಿಗೆ ಗಂಭಿರಗಾಯಗಳಾಗಿವೆ.

ಈ ಅಪಘಾತದಲ್ಲಿ ಗಾಯಾಗೊಂಡಿರುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಂಡ್ವಾ ಜಿಲ್ಲಾ ಕೇಂದ್ರದಿಂದ 70 ಕಿ.ಮೀ ದೂರದಲ್ಲಿರುವ ಖಲ್ವಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ.

Edited By : Nirmala Aralikatti
PublicNext

PublicNext

05/12/2020 07:43 am

Cinque Terre

73.83 K

Cinque Terre

0

ಸಂಬಂಧಿತ ಸುದ್ದಿ