ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ : ಹಾನಗಲ್‌ನಲ್ಲಿ ನೈತಿಕ ಪೊಲೀಸ್ ಗಿರಿ - ಹೋಟೆಲ್ ರೂಮ್‌ನಲ್ಲಿ ಜೋಡಿಗೆ ಹಿಗ್ಗಾಮುಗ್ಗಾ ಥಳಿತ

ಹಾವೇರಿ : ಹಾವೇರಿ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಬೆಳಕಿಗೆ ಬಂದಿದೆ. ಅನ್ಯಕೋಮಿನ ಮಹಿಳೆಯೊಂದಿಗೆ ಸಿಕ್ಕಿ ಬಿದ್ದ ಪುರುಷನನ್ನು ಹಿಗ್ಗಾಮುಗ್ಗಾ ಥಳಿಸಲಾಗಿದೆ. ನೈತಿಕ ಪೊಲೀಸ್ ಗಿರಿ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಅವರಿಬ್ಬರೂ ವಿವಾಹಿತರು. ಅವನಿಗೆ ಹೆಂಡತಿ, ಇವಳಿಗೆ ಗಂಡ ಇದ್ದರೂ ಅವರಿಬ್ಬರ ನಡುವೆ ಸಂಬಂಧ ಬೆಳದಿತ್ತು. ಈ ಸಂಬಂಧ ಹೋಟೆಲ್ ರೂಮ್ ಮಾಡುವವರೆಗೂ ಬಂದಿತ್ತು. ಆದರೆ, ಇವರು ಬೇರೆ ಬೇರೆ ಧರ್ಮದವರಾಗಿದ್ದರಿಂದ ಹೋಟೆಲ್ ರೂಮಿನಲ್ಲಿಯೇ ಜೋಡಿಯನ್ನು ಯುವಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ನಾಲ್ಕರ ಕ್ರಾಸ್ ಬಳಿ ಇರುವ ಖಾಸಗಿ ಹೊಟೇಲ್‌ನಲ್ಲಿ ಘಟನೆ ನಡೆದಿದ್ದು, ಅನ್ಯಕೋಮಿನ ವಿವಾಹಿತ ಮಹಿಳೆಯೊಂದಿಗೆ ಇದ್ದ ಪುರುಷನನ್ನು ಯುವಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಹಿಳೆಯ ಪರಿಚಯಸ್ಥ ಯುವಕರ ಗುಂಪು ಬುರ್ಖಾ ಹಾಕಿಕೊಂಡು ಬಂದು ಮಲಗಿದಿಯಾ..? ಎಂದು ಜೋಡಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ರೂಮಲ್ಲಿ ನೀರು ಬರ್ತಾ ಇದೆಯಾ ಚೆಕ್ ಮಾಡಬೇಕು ತಗೀರಿ ಬಾಗಿಲು ಎಂದ ಯುವಕರು, ಬಾಗಿಲು ಓಪನ್ ಮಾಡಿದ್ದೇ ತಡ ಹಲ್ಲೆ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದೆ. ಈ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಮಹಿಳೆ ಮೇಲೆ ಮತ್ತೇನಾದರೂ ದೌರ್ಜನ್ಯ ನಡೆದಿದೆಯಾ ಎಂಬ ಬಗ್ಗೆ ತನಿಖೆ ನಡೆಸ್ತಿರೋ ಪೊಲೀಸರು, ಮಹಿಳೆ ಹೇಳಿಕೆ ಪಡೆಯುತ್ತಿದ್ದಾರೆ. ಈಗಾಗಲೇ ಘಟನೆ ಸಂಬಂಧ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.

Edited By : Ashok M
PublicNext

PublicNext

10/01/2024 07:52 pm

Cinque Terre

29.77 K

Cinque Terre

2