ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಣ್ಣು ಮಗುವಿಗೆ ಜನ್ಮವಿತ್ತ ದೀಪಿಕಾ ಪಡುಕೋಣೆ

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣ್ವೀರ್ ಸಿಂಗ್ ಪೋಷಕರಾಗಿದ್ದಾರೆ. ದೀಪಿಕಾ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮುಂಬೈನ ಅಂಬಾನಿ ಮಾಲೀಕತ್ವದ ಕೋಕಿಲಾ ಬೇನ್ ಆಸ್ಪತ್ರೆಗೆ ನಿನ್ನೆ ದಾಖಲಾಗಿದ್ದರು. ಸೆಪ್ಟೆಂಬರ್ 28ರಂದು ದೀಪಿಕಾಗೆ ಡೆಲಿವರಿ ಡೇಟ್ ಇತ್ತು. ಆದರೆ ನಿಗದಿಗಿಂತ 20 ದಿನ ಮೊದಲೇ ದೀಪಿಕಾ ರಣ್ವೀರ್ ಮನೆಗೆ ಗೌರಿಯ ಆಗಮನವಾಗಿದೆ.

ಒಂದು ದಿನದ ಹಿಂದಷ್ಟೇ ದೀಪಿಕಾ ಪಡುಕೋಣೆ ತಮ್ಮ ಪತಿ ರಣ್ವೀರ್ ಸಿಂಗ್ ಹಾಗೂ ಕುಟುಂಬದವರ ಜೊತೆಗೆ ಬರಿಗಾಲಿನಲ್ಲಿ ಮುಂಬೈನ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.

ಆದರೆ ಈ ಖುಷಿಯ ವಿಚಾರವನ್ನು ಇವರಿಬ್ಬರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿಯೂ ಪೋಸ್ಟ್ ಮಾಡಿಲ್ಲ, ಕೆಲ ದಿನಗಳ ಹಿಂದಷ್ಟೇ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಅವರು ಜೊತೆಯಾಗಿ ಪ್ರಗ್ನೆನ್ಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು.

Edited By : Nirmala Aralikatti
PublicNext

PublicNext

08/09/2024 01:35 pm

Cinque Terre

67.15 K

Cinque Terre

1