ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

3ನೇ ಹಂತದ ಸ್ತನ ಕ್ಯಾನ್ಸರ್​​ನಿಂದ ಬಳಲುತ್ತಿರುವ ನಟಿ ಹಿನಾ ಖಾನ್ : ರ‍್ಯಾಂಪ್​ ವಾಕ್ ಮಾಡಿ ಗಮನ ಸೆಳೆದ ಬೆಡಗಿ

ಬಾಲಿವುಡ್​ ಚೆಲುವೆ ಹಿನಾ ಖಾನ್​​ 3ನೇ ಹಂತದ ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೂಲಕ ಸರಿಯಾದ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಮೋಥೆರಪಿಯನ್ನು ಪಡೆಯುತ್ತಾ ಕ್ಯಾನ್ಸರ್​ ವಿರುದ್ಧ ಹಿನಾ ಖಾನ್​​ ಹೋರಾಡುತ್ತಿದ್ದಾರೆ.

ಹೀಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್​ ಆಗಿದ್ದಾರೆ. ಸದ್ಯ ನಟಿ ಕೆಂಪು ಗೌನ್​ ಧರಿಸಿ ಮಿಂಚಿದ್ದಲ್ಲದೆ, ರ‍್ಯಾಂಪ್​ ವಾಕ್​ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸದ್ಯ ಹಿನಾ ಖಾನ್​ ಬೆಕ್ಕಿನ ನಡಿಗೆಯ ದೃಶ್ಯ ನೋಡಿ ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್​ ಮಾಡಿದ್ದಾರೆ. ಅದರಲ್ಲಿ ಕೆಲವರು ‘ಅವಳು ತುಂಬಾ ಗಟ್ಟಿಮುಟ್ಟಾದ ವ್ಯಕ್ತಿ. ಆಕೆಯನ್ನು ಬಿಗ್​ ಬಾಸ್​​ನಲ್ಲಿ ಶೇರ್​ ಖಾನ್​ ಎಂದು ಹೇಳಬೇಕಾಗಿತ್ತು’ ಎಂದು ಕಾಮೆಂಟ್​ ಮಾಡಿದ್ದಾರೆ.

ಇತ್ತೀಚೆಗೆ ನಟಿ ಮಹಿಮಾ ಚೌಧರಿಯನ್ನು ಹಿನಾ ಖಾನ್​ ಭೇಟಿಯಾಗಿದ್ದಾರೆ. ಈ ವೇಳೆ ತಮ್ಮ ಮೊದಲ ಕೀಮೋ ಚಿಕಿತ್ಸೆಯ ಪಡೆಯುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು. ಅತ್ತ ನಟಿ ಮಹಿಮಾ ಸ್ತನ ಕ್ಯಾನ್ಸರ್​ನಿಂದ ಹೋರಾಡುತ್ತಿದ್ದು, ಆಕೆಗೆ ಹಿನಾ ಧೈರ್ಯ ತುಂಬಿದ್ದಾರೆ.

Edited By : Nirmala Aralikatti
PublicNext

PublicNext

16/09/2024 08:48 pm

Cinque Terre

71.29 K

Cinque Terre

0