ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‌ಎರಡು ತಿಂಗಳ ಕೂಸು ಜೊತೆ ಅಮಲಾ ಪೌಲ್‌ ಫೋಟೋ ಶೂಟ್‌

ಅಮಲಾ ಪೌಲ್ ತನ್ನ ಪತಿ ಜಗತ್ ದೇಸಾಯಿಯೊಂದಿಗೆ ಓಣಂ ಶೂಟ್‌ ಮಾಡಿಸಿದ್ದು,ಮೊದಲ ಬಾರಿಗೆ ಮಗುವಿನ ಫೊಟೋ ರಿವೀಲ್‌ ಮಾಡಿದ್ದಾರೆ. ದೋಣಿಯಲ್ಲಿ ಕೂತು ದಂಪತಿಗಳು ಓಣಂ ಬಟ್ಟೆ ಧರಿಸಿ,ಅದರ ಜೊತೆಗೆ ಮೂರು ತಿಂಗಳ ಮಗುವಿಗೂ ಓಣಂ ಬಟ್ಟೆ ಹಾಕಿ ಶೂಟ್‌ ಮಾಡಿಸಿದ್ದಾರೆ. ಮೂವರು ಕೆಂಪು ಹಾಗೂ ಬಿಳಿ ಬಣ್ಣದ ಥೀಮ್‌ ನಲ್ಲಿ ಬಟ್ಟೆ ಧರಿಸಿದ್ದರು.ಅಮಲಾ ಪೌಲ್ ಮತ್ತು ಜಗತ್ ದೇಸಾಯಿ ಕಳೆದ ವರ್ಷ ನವೆಂಬರ್‌ನಲ್ಲಿ ವಿವಾಹವಾಗಿದ್ದರು, ಹಾಗೂ ಈ ವರ್ಷ ಜೂನ್‌ ನಲ್ಲಿ ಮೊದಲ ಮಗುವನ್ನು ಸ್ವಾಗತಿಸಿದ್ದರು.ಜಗತ್‌ ಗುಜರಾತ್‌ ಮೂಲದವರಾಗಿದ್ದು, ಪ್ರವಾಸೋದ್ಯಮ ಮತ್ತು ಹಾಸ್ಪಿಟಲಿ ಬಿಸಿನೆಸ್‌ ನಲ್ಲಿದ್ದು, ಉತ್ತರ ಗೋವಾದಲ್ಲಿ ಐಷಾರಾಮಿ ಹೋಮ್‌ಸ್ಟೇ ಮಾರಾಟ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ.ಅಮಲಾ ಟ್ರಾವೆಲ್‌ ಮಾಡುವಾಗ ಭೇಟಿಯಾಗಿ,ಪ್ರೀತಿಯಲ್ಲಿ ಬಿದ್ದು ವಿವಾಹವಾಗಿದ್ದರು.

Edited By : Suman K
PublicNext

PublicNext

16/09/2024 07:37 pm

Cinque Terre

26.58 K

Cinque Terre

1