ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಣ್ಣುಮಕ್ಕಳ ಲೈಂಗಿಕ ಆಸಕ್ತಿ ಹೆಚ್ಚಿಸಲು ಹಾಲಿವುಡ್‌ ನಟಿ ಕೇಟ್ ಟಿಪ್ಸ್‌

ಹಾಲಿವುಡ್ ನ ಟೈಟಾನಿಕ್ ನಟಿ ಕೇಟ್ ವಿನ್ಸ್ಲೆಟ್ ಇತ್ತೀಚೆಗೆ ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿಗೆ ಒಳಗಾಗಿದ್ದು, ಇದು ತನ್ನ ಕಾಮಾಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಿದೆ ಎಂದು ನಟಿ ಪಾಡ್‌ಕ್ಯಾಸ್ಟ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಕೆಲವೊಂದು ಮಹಿಳೆಯರಿಗೆ ಥೈರಾಯ್ಡ್‌ ಸಮಸ್ಯೆ ಬಂದಾಗ ಹಾರ್ಮೋನ್‌ ಅಸಮತೋಲನದಿಂದ ಕಾಮಪ್ರಚೋದಕದಲ್ಲಿ ಗಮನಾರ್ಹ ಕುಸಿತ ಕಂಡುಬರುತ್ತದೆ, ಹಾಗಾಗಿ ಲೈಂಗಿಕ ಜೀವನ ಸುಧಾರಿಸಲು ಒಂದಷ್ಟು ಟಿಪ್ಸ್‌ ಕೊಟ್ಟಿದ್ದಾರೆ ನಟಿ. ಮಹಿಳೆಯರ ದೇಹದಲ್ಲಿ ಟೆಸ್ಟೋಸ್ಟೆರಾನ್ ಅಂಶ ಕಡಿಮೆ ಆದಾಗ, ತನ್ನಷ್ಟಕ್ಕೆ ಸೆಕ್ಸ್‌ ಡ್ರೈವ್‌ ಕಡಿಮೆಯಾಗುತ್ತದೆ ಹಾಗಾಗಿ ಅದನ್ನು ಬದಲಿಸಬೇಕು ಎಂದಿದ್ದಾರೆ. ಈ ರೀತಿ ಮಾಡಿದ್ದರಿಂದ ಕೇಟ್‌ ಗೂ ಕೂಡ ಲೈಂಗಿಕಾಸಕ್ತಿ ಜಾಸ್ತಿಯಾಗಿದೆಯಂತೆ. 2012 ರಲ್ಲಿ ಈಕೆ ಕೇಟ್ ವಿನ್ಸ್ಲೆಟ್ ಎಡ್ವರ್ಡ್ ಅಬೆಲ್ ಸ್ಮಿತ್ ಅವರನ್ನು ವಿವಾಹವಾಗಿದ್ದರು.ಕೇಟ್‌ ಅಭಿನಯದ ಮುಂಬರುವ ಚಿತ್ರ ʼಲೀʼ ಈ ತಿಂಗಳ ಆರಂಭದಲ್ಲಿ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಪ್ರದರ್ಶನಗೊಂಡಿತ್ತು.

Edited By : Somashekar
PublicNext

PublicNext

16/09/2024 07:29 pm

Cinque Terre

26.47 K

Cinque Terre

0