ಬೆಂಗಳೂರು : ನಾಳೆ ಬಿಜೆಪಿಯ ಮಾಜಿ ಸಚಿವರು ಶಾಸಕರ ಸಭೆಯನ್ನ ರದ್ದುಗೊಳಿಸಲಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಸೂಚನ ಮೇರೆಗೆ ನಾಳೆಯ ಸಭೆಯನ್ನ ರದ್ದುಗೊಳಿಸಲಾಗಿದೆ ಎಂದು ಬಿಜೆಪಿಯ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತಂತೆ ಮಾತನಾಡಿದ ವಿಜಯೇಂದ್ರ ಅವರನ್ನೇ ಮತ್ತೆ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸುತ್ತಾರೆ ಅನ್ನೋ ವಿಶ್ವಾಸ ಇದೆ. ಇನ್ನೇನಿದ್ದರೂ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಸಭೆ ಮಾಡ್ತೀವಿ. ಮತ್ತೆ ಪ್ರತ್ಯೇಕ ಸಭೆ ಮಾಡೋದಿಲ್ಲ. ಇನ್ನೊಂದು ವಾರದಲ್ಲಿ ಆಂತರಿಕ ಸಂಘರ್ಷ ಅಂತ್ಯವಾಗುತ್ತೆ ಮುಂದೆ ಎಲ್ಲ ಒಟ್ಟಾಗಿ ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ ಇರಲಿದೆ ಎಂದು ತಿಳಿಸಿದರು.
PublicNext
11/02/2025 11:08 pm