ಬೆಂಗಳೂರು : ಪ್ರೇಮಿಗಳ ದಿನಾಚರಣೆಗೆ ಕೌಂಟ್‌ಡೌನ್ ಶುರು ಆಗಿದೆ... ಸಿಲಿಕಾನ್ ಸಿಟಿಯ ಲವರ್ಸ್ ಗುಲಾಬಿಯ ಹಿಂದೆ ಬಿದ್ದಿದ್ದಾರೆ.. ಆದ್ರೆ ರೋಸ್ ರೇಟ್‌ಗೆ ರೋಸಿ ಹೋಗಿರುವ ನಗರದ ಪ್ರೇಮಿಗಳು ಡಬಲ್ ರೇಟ್ ಟ್ರಬಲ್ ಫೇಸ್ ಮಾಡ್ತಾ ಇದ್ದಾರೆ...
ಇನ್ನೊಂದು ಕಡೆ ಜನ ಸಾಮಾನ್ಯರು ಕೂಡ ದೇವರಿಗೆ ಹೂ ಹಾಕಲು ಗುಲಾಬಿ ದರ ಏರಿಕೆ ಬರೆ ಬಿದ್ದಿದೆ..
ಇನ್ನು ಚಳಿಗಾಲ ಹಿನ್ನಲೆ ರೋಸ್ ಮಾರುಕಟ್ಟೆಗೆ ಬರುವ ಪ್ರಮಾಣ ಕೂಡ ಕಡಿಮೆ ಇದ್ಯಂತೆ.. ಒಂದು ಗುಚ್ಚಕ್ಕೆ 100 ರೂಪಾಯಿ ಫಿಕ್ಸ್ ಮಾಡಲಾಗಿದೆ. ಒಂದು ಗುಚ್ಚದಲ್ಲಿ ಸುಮಾರು 20 ಗುಲಾಬಿಗಳು ಇರ್ತಾವೆ..
ಪ್ರೀತಿಯ ಸಂಕೇತವಾಗಿ ಗುರುತಿಸಿಕೊಂಡಿರುವ ಗುಲಾಬಿ ಹೂವುಗೆ ಡಿಮ್ಯಾಂಡ್ ಬಂದಿದೆ. ಈ ಹಿನ್ನಲೆ ಕೆಂಪು, ಹಳದಿ, ಬಿಳಿ ಸೇರಿ ಅನೇಕ ಕಲರ್ ರೋಸ್ ಭಾರೀ ಬೇಡಿಕೆ ಕ್ರಿಯೇಟ್ ಆಗಿದ್ದು, ಗುಲಾಬಿಯಲ್ಲಿರುವ ಮುಳ್ಳಿನ ಹಾಗೇ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕ್ತಿದೆ.
PublicNext
11/02/2025 08:41 am