", "articleSection": "Entertainment,Cinema,Cultural Activity", "image": { "@type": "ImageObject", "url": "https://prod.cdn.publicnext.com/s3fs-public/229640-1739275567-bng01.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬಹುದೊಡ್ಡ ಸಂಭ್ರಮಕ್ಕೆ ಸಾಕ್ಷಿಯಾಗಲಿರುವ ಪಬ್ಲಿಕ್ ನೆಕ್ಸ್ಟ್ ಪುನೀತ್ ಉತ್ಸವ ಸೀಜನ್-3ಕ್ಕೆ ಆಗಮಿಸು...Read more" } ", "keywords": "Bangalore News, Ashwini Puneeth Rajkumar, Puneeth Rajkumar Fans, Puneeth Utsav, Celebrity Invitation, Karnataka News, Sandalwood News, Puneeth Rajkumar Tribute, Film Industry Event.,Bangalore,Bangalore-Rural,Entertainment,Cinema,Cultural-Activity", "url": "https://publicnext.com/node" } ಬೆಂಗಳೂರು: ಅಶ್ವಿನಿ ಪುನೀತ್ ರಾಜ್‍ಕುಮಾರ್‌ಗೆ ಆತ್ಮೀಯ ಆಹ್ವಾನ - ಪುನೀತ್ ಉತ್ಸವದ ಸಂಭ್ರಮಕ್ಕೆ ಮೆರಗು..!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಶ್ವಿನಿ ಪುನೀತ್ ರಾಜ್‍ಕುಮಾರ್‌ಗೆ ಆತ್ಮೀಯ ಆಹ್ವಾನ - ಪುನೀತ್ ಉತ್ಸವದ ಸಂಭ್ರಮಕ್ಕೆ ಮೆರಗು..!

ಬೆಂಗಳೂರು: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬಹುದೊಡ್ಡ ಸಂಭ್ರಮಕ್ಕೆ ಸಾಕ್ಷಿಯಾಗಲಿರುವ ಪಬ್ಲಿಕ್ ನೆಕ್ಸ್ಟ್ ಪುನೀತ್ ಉತ್ಸವ ಸೀಜನ್-3ಕ್ಕೆ ಆಗಮಿಸುವಂತೆ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದಿಂದ ಆತ್ಮೀಯವಾಗಿ ಆಮಂತ್ರಣ ನೀಡಿ ಆಹ್ವಾನಿಸಲಾಗಿದೆ.

ಶ್ರೀದುರ್ಗಾ ಡೆವಪರ್ಸ್ ಆ್ಯಂಡ್ ಪ್ರಮೋಟರ್ಸ್ ಸಹಭಾಗಿತ್ವದಲ್ಲಿ ಪಬ್ಲಿಕ್ ನೆಕ್ಸ್ಟ್ ವತಿಯಿಂದ ಆಯೋಜಿಸಲಾಗಿರುವ ಪುನೀತ್ ಉತ್ಸವ ಸೀಜನ್-3ಗೆ ಆಗಮಿಸುವಂತೆ ನಟ ದಿ. ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಆಶ್ವಿನಿ ಪುನೀತ್‌ರಾಜಕುಮಾರ್ ಅವರಿಗೆ ಪಬ್ಲಿಕ್ ನೆಕ್ಸ್ಟ್ ಮುಖ್ಯಸ್ಥರಾದ ರಾಘವೇಂದ್ರ ರಾವ್, ಮಂಜುನಾಥ ರಾವ್ ಅವರು ಸಮಾಲೋಚನೆ ನಡೆಸಿ ಆತ್ಮೀಯವಾಗಿ ಆಮಂತ್ರಣ ನೀಡಿದ್ದಾರೆ.

ಸಾಮಾಜಿಕ ಹೊಣೆಗಾರಿಕೆ ಜೊತೆಗೆ ಪಬ್ಲಿಕ್ ನೆಕ್ಸ್ಟ್ ಮನರಂಜನೆ ಕ್ಷೇತ್ರದಲ್ಲೂ ಕಲಾವಿದರಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಆರಂಭಿಸಿದ ಕರ್ನಾಟಕ ರತ್ನ ದಿವಂಗತ ಪುನೀತ್ ರಾಜಕುಮಾರ್ ಸ್ಮರಣಾರ್ಥ ಆಯೋಜಿಸಿದ್ದ ಪಬ್ಲಿಕ್ ನೆಕ್ಸ್ಟ್ ಪುನೀತ್ ಉತ್ಸವ ಎರಡು ಅದ್ಭುತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿ ಹೊಂದಿದೆ. ಈ ನಿಟ್ಟಿನಲ್ಲಿ ಮೂರನೇ ಕಾರ್ಯಕ್ರಮಕ್ಕೆ ಕಾಲಿಟ್ಟಿದೆ. ಈಗ ಪುನೀತ್ ರಾಜ್‌ಕುಮಾರ್ ಕುಟುಂಬಕ್ಕೆ ಗೌರವ ಸಮರ್ಪಣೆ ಮಾಡುವ ಸದುದ್ದೇಶದಿಂದ ಇಂತಹದೊಂದು ಕಾರ್ಯಕ್ರಮ ಆಯೋಜಿಸಲಾಗಿದೆ.

Edited By : Manjunath H D
PublicNext

PublicNext

11/02/2025 05:36 pm

Cinque Terre

11.57 K

Cinque Terre

0