", "articleSection": "Entertainment,Law and Order,International", "image": { "@type": "ImageObject", "url": "https://prod.cdn.publicnext.com/s3fs-public/229640-1739108544-bng6.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಇಂಗ್ಲೆಂಡ್ ಮೂಲದ ಖ್ಯಾತ ಗಾಯಕ ಎಡ್ ಶೀರನ್ ಸರ್ಪ್ರೈಸ್ ಶೋಗೆ ಚರ್ಚ್ ಸ್ಟ್ರೀಟ್‌ನಲ್ಲಿ ಪೊಲೀಸರು ತಡೆಯೊಡ್ಡಿದ್ದಾರೆ. ಇವತ್ತು ಸಂಜ...Read more" } ", "keywords": "Bengaluru News, Footpath, Sheran Shoshan, England Singer, Concert Disrupted, Police Intervention, Bengaluru Police, Karnataka News, Music Event, Footpath Festival, Singer Sheran Shoshan.,Bangalore,Bangalore-Rural,Entertainment,Law-and-Order,International", "url": "https://publicnext.com/node" }
ಬೆಂಗಳೂರು: ಇಂಗ್ಲೆಂಡ್ ಮೂಲದ ಖ್ಯಾತ ಗಾಯಕ ಎಡ್ ಶೀರನ್ ಸರ್ಪ್ರೈಸ್ ಶೋಗೆ ಚರ್ಚ್ ಸ್ಟ್ರೀಟ್‌ನಲ್ಲಿ ಪೊಲೀಸರು ತಡೆಯೊಡ್ಡಿದ್ದಾರೆ.
ಇವತ್ತು ಸಂಜೆ 4 ಗಂಟೆಗೆ ಮಾದವರದ ನೈಸ್ ಗ್ರೌಂಡ್‌ನಲ್ಲಿ ಎಡ್ ಶೀರನ್ ಕಾರ್ಯಕ್ರಮ ಆಯೋಜನೆಯಾಗಿತ್ತು. ನಿನ್ನೆ ಹಾಗೂ ಇವತ್ತು ಎರಡು ದಿನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. Ed Sheeran India tour 2025 ಭಾಗವಾಗಿ ಚೆನೈ, ಹೈದಾರಬಾದ್, ಪುಣೆ ಬಳಿ ಬೆಂಗಳೂರನಲ್ಲಿ ಮ್ಯೂಸಿಕ್ ನೈಟ್ ಆಯೋಜನೆ ಮಾಡಲಾಗಿದೆ. ನಿನ್ನೆಯೂ ಕಾರ್ಯಕ್ರಮದಲ್ಲಿ ಶೀರನ್ ಅವರು ಭಾಗಿಯಾಗಿ ಇಂದು ಚರ್ಚ್ ಶೀಟ್ ಗೆ ಬಂದಿದ್ದರು. ಆಗ ಸಪ್ರೈಸ್ ನೀಡಲು ಹಾಡು ಹೇಳ್ತಿರುವಾಗ ನೂರಾರು ಜನ ಸೇರಿದ್ದಾರೆ. ಆದರೆ ಜನ ಸೇರಿಸಲು ಅನುಮತಿಯಿಲ್ಲದ ಕಾರಣ ಪೊಲೀಸರಿಂದ ತಡೆಯೊಡ್ಡಿದ್ದಾರೆ. ಚರ್ಚ್ ಸ್ಟ್ರೀಟ್‌ನಲ್ಲಿ ಮೈಕ್ ಮೂಲಕ Shape of you ಫೇಮಸ್ ಸಾಂಗ್ ಹಾಡ್ತಿದ್ದಾಗಲೆ ಸ್ಥಳಕ್ಕೆ ತೆರಳಿದ ಕಬ್ಬನ್ ಪಾರ್ಕ್ ಪೊಲೀಸರು ಮೈಕ್ ಪ್ಲಗ್ ಕಿತ್ತು ಕಾರ್ಯಕ್ರಮ ನಿಲ್ಲಿಸಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಿಸಿಕೊಳ್ಳದೇ ಸಾಂಗ್ ಹಾಡೋದಕ್ಕೆ ತಡೆಯೊಡ್ಡಿ, ಜನರನ್ನು ತೆರವುಗೊಳಿಸಿದ್ದಾರೆ. ಇನ್ನು ಶೀರನ್ ಕಾರ್ಯಕ್ರಮಕ್ಕೆ ತಡೆಯೊಡ್ಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರಿಂದ ಆಕ್ರೋಶ ಕೂಡ ವ್ಯಕ್ತವಾಗ್ತಿದ್ದು, ಘಟನೆ ಸಂಬಂಧಪಟ್ಟ ವಿಡಿಯೋ ಎಕ್ಸ್ ನಲ್ಲಿ ವೈರಲ್ ಆಗ್ತಿದೆ.
PublicNext
09/02/2025 07:12 pm