", "articleSection": "Crime,Law and Order,News", "image": { "@type": "ImageObject", "url": "https://prod.cdn.publicnext.com/s3fs-public/421698-1739187169-V3~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಕೊಲೆ ಕೇಸ್ ನಲ್ಲಿ ಆರೋಪಿಯಾಗಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 14 ವರ್ಷಗಳ ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿ ಜಾನ್ ಎಂ...Read more" } ", "keywords": "RT Nagar police, murder accused arrested, 14-year-old case, cold case solved, Bengaluru crime, Karnataka police, murder investigation, justice after 14 years, crime news.,Bangalore,Bangalore-Rural,Crime,Law-and-Order,News", "url": "https://publicnext.com/node" }
ಬೆಂಗಳೂರು : ಕೊಲೆ ಕೇಸ್ ನಲ್ಲಿ ಆರೋಪಿಯಾಗಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 14 ವರ್ಷಗಳ ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿ ಜಾನ್ ಎಂಬಾತನನ್ನು ಆರ್ ಟಿ ನಗರ ಪೊಲೀಸರು ಬಂಧಿಸಿದ್ದಾರೆ. 2011 ರಲ್ಲಿ 20 ವರ್ಷದ ಚೇತನ್ ಎಂಬಾತನನ್ನು ಆರ್ ಟಿ ನಗರ ದ ಕೆಂಪೇಗೌಡ ಕಾಲೋನಿಯಲ್ಲಿ ಆರೋಪಿ ಜಾನ್ ಹಾಗೂ ಇತರೆ ಮೂವರು ಆರೋಪಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ರು.
ಮೃತ ಚೇತನ್ ತಂದೆ ನೀಡಿದ ದೂರಿನನ್ವಯ ಜಾನ್ ಹೊರತುಪಡಿಸಿ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿ ಪೊಲೀಸರು ಚಾರ್ಜ್ ಶೀಟ್ ಕೂಡ ಸಲ್ಲಿಸಿದ್ರು. ಆದರೆ ಜಾನ್ ಮಾತ್ರ ಕೊಲೆ ಆದ ದಿನದಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ. ಬೇರೆ- ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಿಕೊಂಡು ಯಾರ ಸಂಪರ್ಕಕ್ಕೂ ಸಿಗದೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ. ಆರೋಪಿಯ ಬಂಧನಕ್ಕೆ 20 ಕ್ಕೂ ಹೆಚ್ಚು ಬಾರಿ ವಾರೆಂಟ್ ಜಾರಿಯಾಗಿತ್ತು.
ಪೊಲೀಸರು ಈತನನ್ನು ಹುಡುಕಾಡಿ ಹುಡುಕಾಡಿ ಸುಸ್ತಾಗಿದ್ರು. ಸದ್ಯ ನಗರ ಪೊಲೀಸ್ ಆಯುಕ್ತ ದಯಾನಂದ್ ಕ್ರೈಂ ಮಾಡಿ ಎಸ್ಕೇಪ್ ಆದವರನ್ನು ಪತ್ತೆ ಹಚ್ಚಲೇಬೇಕು ಎಂದು ಸೂಚಿದ ಬೆನ್ನಲ್ಲೇ ಉತ್ತರ ವಿಭಾಗ ಡಿಸಿಪಿ ಸೈದುಲು ಅಡವಾತ್ ಅಲರ್ಟ್ ಆಗಿದ್ರು. ವಿಶೇಷ ಕಾರ್ಯಾಚರಣೆ ನಡೆಸಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿದ್ರು. ಟೀಮ್ ಮಾಡಿಕೊಂಡು ಹೊರಟ ಆರ್ ಟಿ ನಗರ ಪೊಲೀಸರು ರೌಡಿಶೀಟರ್ ಒಬ್ಬ ನೀಡಿದ ಮಾಹಿತಿ ಹಾಗೂ ಟೆಕ್ನಿಕಲ್ ಎವಿಡೆನ್ಸ್ ಗಳ ಆಧಾರದ ಮೇಲೆ ಜಾನ್ ಸುಳಿವು ಪತ್ತೆಯಾಗಿತ್ತು.
ಆರೋಪಿ ಜಾನ್ ಅಪ್ಪ-ಅಮ್ಮ ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ವಾಸವಾಗಿದ್ದರ ಬಗ್ಗೆ ಪೊಲೀಸರಿಗೆ ಗೊತ್ತಾಗಿತ್ತು. ಪೊಲೀಸರಿಗೆ ತನ್ನ ಬಗ್ಗೆ ಮಾಹಿತಿ ಸಿಗಬಾರದು ಅಂತಾ ಆರೋಪಿ ಪದೇ ಪದೇ ಮನೆ ಬದಲಾಯಿಸುತ್ತಿದ್ದ. ಸದ್ಯ ಆರೋಪಿ ಮಲ್ಲೇಶ್ವರಂನಲ್ಲಿ ವಾಸವಿದ್ದದ್ದನ್ನು ಕನ್ಫರ್ಮ್ ಮಾಡಿಕೊಂಡು ಪೊಲೀಸರು ಮಪ್ತಿಯಲ್ಲಿ ತೆರಳಿ ಬಂಧಿಸಿದ್ದಾರೆ.
PublicNext
10/02/2025 05:03 pm