", "articleSection": "Crime,Law and Order,Cinema", "image": { "@type": "ImageObject", "url": "https://prod.cdn.publicnext.com/s3fs-public/387839-1739259259-Untitled-design---2025-02-11T130409.743.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಡ್ರಗ್ ಕೇಸ್‌ನಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿಗೆ ಮತ್ತೆ ಸಂಕಷ್ಟ ಎದುರಾಗೋ ಸಾಧ್ಯತೆಯಿದೆ. ಸದ್ಯ ಸಂಜಾನ ಮೇಲಿದ್ದ ಪ್ರಕರಣರ...Read more" } ", "keywords": "Bengaluru, Drug Case, Sanjjanaa, Big Shock, Case Quashed, Appeal Filed, CCB Probe, Karnataka High Court, Bollywood Actress, Drug Scandal. ,Bangalore,Crime,Law-and-Order,Cinema", "url": "https://publicnext.com/node" }
ಬೆಂಗಳೂರು: ಡ್ರಗ್ ಕೇಸ್‌ನಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿಗೆ ಮತ್ತೆ ಸಂಕಷ್ಟ ಎದುರಾಗೋ ಸಾಧ್ಯತೆಯಿದೆ. ಸದ್ಯ ಸಂಜಾನ ಮೇಲಿದ್ದ ಪ್ರಕರಣರದ್ದಾಗಿದ್ದು, ಇದನ್ನ ಪ್ರಶ್ನಸಿ ಸುಪ್ರಿಂ ಮೊರೆಹೋಗಲು ಸಿಸಿಬಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ.
ಈ ಮೂಲಕ ಸಿಸಿಬಿ ಅಧಿಕಾರಿಗಳು ನಟಿ ಸಂಜನಾಗೆ ಶಾಕ್ ನೀಡಿದ್ದಾರೆ. 2020ರಲ್ಲಿ ನಟಿ ಸಂಜನಾ ಮೇಲೆ ಡ್ರಗ್ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳು ಸಂಜನಳನ್ನ ಬಂಧಿಸಿ ಜೈಲಿಗೂ ಕಳುಹಿಸಿದ್ರು. ಜೈಲಿನಲ್ಲಿ ಕೆಲಕಾಲ ಕಳೆದ ಸಂಜನಾ ಜೈಲಿನಿಂದ ಹೊರಬಂದು ಕಾನೂನು ಹೋರಾಟ ನಡೆಸಿದ್ರು.
ಹೈಕೋರ್ಟ್‌ನಲ್ಲಿ ಸಂಜನಾ ಮೇಲಿದ್ದ ಪ್ರಕರಣ ರದ್ದಾಗಿತ್ತು. ಸದ್ಯ ಡ್ರಗ್ ಸೇವನೆ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಸಿಸಿಬಿ ಪೊಲೀಸರು ನಿರ್ಧಾರ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ. ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆಗೆ ಸಿಸಿಬಿ ಮನವಿ ಮಾಡಿದ್ದು, ಶೀಘ್ರವೇ ಗೃಹ ಇಲಾಖೆಯಿಂದ ಅನುಮತಿ ಸಿಗುವ ಸಾಧ್ಯತೆಯಿದೆ.
PublicNext
11/02/2025 01:06 pm