", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/52563-1739280957-8adf0212-6e46-4aa9-bede-bbb22bd88301.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ವಂಚಕಿ ಐಶ್ವರ್ಯ ಗೌಡ ಕಹಾನಿ ಬಗೆದಷ್ಟೂ ಬಯಲಾಗ್ತಿದ್ದು, ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಓರ್ವ ಪೊಲೀಸ್ ಅಧಿಕಾರಿ ಜೊತೆ ಐಶ...Read more" } ", "keywords": "Aishwarya Gowda made a trip to Goa with a police officer,Bangalore,Bangalore-Rural,Crime,Law-and-Order", "url": "https://publicnext.com/node" }
ಬೆಂಗಳೂರು : ವಂಚಕಿ ಐಶ್ವರ್ಯ ಗೌಡ ಕಹಾನಿ ಬಗೆದಷ್ಟೂ ಬಯಲಾಗ್ತಿದ್ದು, ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಓರ್ವ ಪೊಲೀಸ್ ಅಧಿಕಾರಿ ಜೊತೆ ಐಶ್ವರ್ಯ ಗೌಡ ಗೋವಾ ಟ್ರಿಪ್ ಮಾಡಿರೋ ಶಂಕೆ ವ್ಯಕ್ತವಾಗಿದೆ. ಸಿಕ್ಕ ಸಿಕ್ಕವರಿಗೆ ವಂಚಿಸಿ ಗೋವಾಗೆ ಹೋಗಿದ್ರು ಎನ್ನಲಾಗಿದೆ.
ಇದಕ್ಕೆ ಸಂಬಂಧಿಸಿದ ಟಿಕೆಟ್ ಹಾಗೂ ಪೊಲೀಸ್ ಆಧಿಕಾರಿಯ ಜೊತೆಯ ಫೋಟೋ ಎಲ್ಲವೂ ಲಭ್ಯವಾಗಿದ್ಯಂತೆ. ಆ ಪೊಲೀಸ್ ಅಧಿಕಾರಿ ಐಶ್ವರ್ಯಗೌಡಗೆ ಸಿಡಿಆರ್ ನೀಡಿರುವ ಅನುಮಾನ ವ್ಯಕ್ತವಾಗಿದೆ.
ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆಗೆ ಇಳಿದಿದ್ದಾರೆ. ಈಗಾಗಲೇ ಸರ್ವೀಸ್ ಪ್ರೊವೈಡರ್ಗೆ ಮಾಹಿತಿ ಕೇಳಿರುವ ಪೊಲೀಸರು, ಯಾವ ಅಧಿಕಾರಿ ಸಿಡಿಆರ್ ಪಡೆದಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು, ಐಶ್ವರ್ಯಾ ಗೌಡ ಬಹುಕೋಟಿ ವಂಚನೆ ಪ್ರಕರಣವನ್ನು ಎಸಿಪಿ ಚಂದನ್ ಕೈಗೆತ್ತುಕೊಂಡಿದ್ದಾರೆ. ದೊಡ್ಡ ದೊಡ್ಡ ಮಟ್ಟದ ಅಧಿಕಾರಿಗಳಿಗೆ ನೊಟೀಸ್ ನೀಡಲು ಸಜ್ಜಾಗಿದ್ದಾರೆ. ಅಲ್ಲದೇ, ಸಿಡಿಆರ್ ತೆಗೆಯಲು ಪೊಲೀಸ್ ಅಧಿಕಾರಿಯೊಬ್ಬರ ಸಹಾಯ ಪಡೆದಿರುವ ಐಶ್ವರ್ಯಾ ಮತ್ತು ಆಕೆೆಯ ಪತಿ ಆ ಪೊಲೀಸ್ ಅಧಿಕಾರಿ ಮತ್ತು ಆ ಅಧಿಕಾರಿಯ ಜೊತೆಯಲ್ಲಿರುವ ಕೆಲವರಿಗೆ ನೊಟೀಸ್ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರಂತೆ.
ಐಶ್ವರ್ಯ ಗೌಡ ಅಕ್ರಮವಾಗಿ ಸಂಪಾದಿಸಿದ ಹಣವನ್ನ ಆ ಪೊಲೀಸ್ ಅಧಿಕಾರಿಗೆ ನೀಡಿರುವ ಬಗ್ಗೆಯೂ ಮಾಹಿತಿ ಇದೆಯಂತೆ. ಇದ್ರಿಂದ ಆ ಪೊಲೀಸ್ ಅಧಿಕಾರಿ ಮತ್ತು ಈಕೆಯ ಬ್ಯಾಂಕ್ ಖಾತೆಯ ವರ್ಗಾವಣೆ ಬಗ್ಗೆ ಪೊಲೀಸರ ಪರಿಶೀಲಿಸಲಿದ್ದಾರೆ. ಒಂದ್ವೇಳೆ, ಪೊಲೀಸ್ ಅಧಿಕಾರಿಗೆ ಹಣ ಏನಾದ್ರು ವರ್ಗಾವಣೆ ಮಾಡಿದ್ದಾರಾ? ಸಿಡಿಆರ್ ತೆಗೆಯಲು ಹಣ ಪಡೆದಿದ್ದಾರಾ? ಈಕೆಯ ಜೊತೆ ಯಾವ್ಯಾವ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.
Kshetra Samachara
11/02/2025 07:06 pm