", "articleSection": "Crime,Law and Order,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1739268739-V6~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಆ ಉದ್ಯಮಿ ಮೊದಲೇ ಬ್ಯುಸಿನೆಸ್ ನಲ್ಲಿ ಲಾಸ್ ಆಗಿ ಕೈ ಸುಟ್ಟು ಕೊಂಡಿದ್ದ. ಈ ವೇಳೆ ಸ್ನೇಹಿತರ ಬಳಿ ಸಹಾಯ ಕೇಳಿದ್ದ. ಆದ್ರೆ ಆ ಸ್ನೇಹಿತ...Read more" } ", "keywords": "Bengaluru fraud case, ₹15 crore scam, ₹37.5 lakh cheating, entrepreneur cheated, Ivora arrest, Bengaluru police, Karnataka crime, financial fraud, business scam.,Bangalore,Bangalore-Rural,Crime,Law-and-Order,News,Public-News", "url": "https://publicnext.com/node" }
ಬೆಂಗಳೂರು: ಆ ಉದ್ಯಮಿ ಮೊದಲೇ ಬ್ಯುಸಿನೆಸ್ ನಲ್ಲಿ ಲಾಸ್ ಆಗಿ ಕೈ ಸುಟ್ಟು ಕೊಂಡಿದ್ದ. ಈ ವೇಳೆ ಸ್ನೇಹಿತರ ಬಳಿ ಸಹಾಯ ಕೇಳಿದ್ದ. ಆದ್ರೆ ಆ ಸ್ನೇಹಿತರು ಗೆಳೆಯನಿಗೆ ದೋಖಾ ಬಗೆದು 15 ಲಕ್ಷ ಕೋಟಿ ಹೆಸ್ರಲ್ಲಿ 37.5 ಲಕ್ಷ ವಂಚಿಸಿದ್ದಾರೆ.
ಶೇಷಾದ್ರಿಪುರ ಉದ್ಯಮಿಗೆ ವಿದೇಶಿ ಹಣದ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ಉಂಡೇನಾಮ ಹಾಕಿದ್ದಾರೆ. ಗದಗ ಮೂಲದ ಉದ್ಯಮಿ ಪ್ರವೀಣ್ ಕುಮಾರ್ ಶೇಷಾದ್ರಿಪುರಂನಲ್ಲಿ ಕಂಪನಿ ನಡೆಸ್ತಿದ್ರು. ಬ್ಯುಸಿನೆಸ್ ನಲ್ಲಿ ಲಾಸ್ ಆಗಿದ್ರಿಂದ ಸ್ನೇಹಿತ ಹಿದಾಯತ್ ಉಲ್ಲಾಖಾನ್ ಹಾಗೂ ಸುಕೀರ್ತಿ ಬಳಿ ಹಣಕಾಸಿನ ಸಹಾಯ ಮಾಡುವಂತೆ ಪ್ರವೀಣ ಕೇಳಿಕೊಂಡಿದ್ರು.
ಈ ವೇಳೆ ಹಿದಾಯತ್ ಹಾಗೂ ಸುಕೀರ್ತಿ, ನಾಗರಬಾವಿಯಲ್ಲಿ ಮಹಿಳಾ ಉದ್ಯಮಿ ಅಂತ ಯುವಾನಿಕ ಎಂಬುವವಳನ್ನ ಪರಿಚಯ ಮಾಡಿಸಿದ್ರು. ಈ ವೇಳೆ ಯುವಾನಿಕ ಅಂಡ್ ಟೀಮ್ ಪ್ರವೀಣ್ ಗೆ ಆಂಟಿಕ್ ಕಾಪರ್ ಬೌಲ್ ಕಥೆ ಕಟ್ಟಿದ್ದಾರೆ. ಆಂಟಿಕ್ ಕಾಪರ್ ಬೌಲ್ ವಸ್ತುವಿಗೆ 15 ಲಕ್ಷ ಕೋಟಿ ಹಣವಿದ್ದು ಅಮೇರಿಕಾದಿಂದ ಬರಬೇಕಿದೆ. ಈ ಹಣವನ್ನ ಫೈಲ್ ತೆರಿಗೆ ಕಟ್ಟಿ ಹಣ ರಿಲೀಸ್ ಮಾಡಿಕೊಳ್ಳಬೇಕಿದೆ ಎಂದು ಹಂತ ಹಂತವಾಗಿ ಸುಮಾರು 37.5 ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾರೆ. ನಂತರ ಹಣ ನೀಡದೆ ತಲೆ ಮರೆಸಿಕೊಂಡಿದ್ರು. ಈ ಬಗ್ಗೆ ಹಣ ಕಳೆದುಕೊಂಡ ಪ್ರವೀಣ್ ಕುಮಾರ್ ಸಿಸಿಬಿಗೆ ದೂರು ನೀಡಿದ್ರು. ದೂರು ದಾಖಲಿಸಿಕೊಂಡ ಪೊಲೀಸರು ಐವರು ಆರೋಪಿಗಳನ್ನ ಬಂಧಿಸಿದ್ದಾರೆ.
ಹಿದಾಯತ್ತುಲ್ಲಾ, ಪ್ರತೀಕ್, ಉಮೇಶ್, ಸುಕೀರ್ತಿ, ಜಾಕಿರ್ ಬಂಧನವಾಗಿದ್ದು, ಯುವಾನಿಕಾ ಹಾಗೂ ಬಿಂದು ಎಂಬುವವರು ತಲೆ ಮರೆಸಿಕೊಂಡಿದ್ದಾರೆ. ಯುವಾನಿಕ ಪತಿ ಪ್ರತೀಕ್ ಗೌಡ ಬಂಧನವಾಗ್ತಿದ್ದಂತೆ ಪ್ರಯಾಗ್ ರಾಜ್ ಗೆ ಹೋಗಿದ್ದು ಇದೀಗ ಪ್ರಯಾಗ್ ರಾಜ್ ನಿಂದಲೂ ಎಸ್ಕೇಪ್ ಆಗಿದ್ದಾಳೆ. ಸದ್ಯ ಸಿಸಿಬಿ ಪೊಲೀಸರು ಯುವಾನಿಕ ಹಾಗೂ ಬಿಂದುಗಾಗಿ ಬಲೆ ಬೀಸಿದ್ದಾರೆ. ಇನ್ನೂ ಪ್ರವೀಣ್ ನಂಬಿಸಲು ಆರೋಪಿಗಳು ನಕಲಿ ಆರ್ ಬಿ ಐ, ಕೇಂದ್ರ ಸರ್ಕಾರ ಹಾಗೂ ಪ್ರತಿಷ್ಠಿತ ಲ್ಯಾಬ್ ರಿಪೋರ್ಟ್ ಗಳನ್ನು ಮಾಡಿಸಿಕೊಂಡಿದ್ರು. ಸದ್ಯ ಸಿಸಿಬಿ ಪೊಲೀಸ್ರು ಐವರನ್ನ ಬಂಧಿಸಿ ಬಂಧಿತರಿಂದ ನಕಲಿ ಆರ್ ಬಿಐ ದಾಖಲೆಗಳು, ಎರಡು ಕಾರು, ಮೊಬೈಲ್ ಹಾಗೂ ಎರಡು ಲಕ್ಷ ನಗದನ್ನ ಸೀಜ್ ಮಾಡಿದ್ದಾರೆ.
PublicNext
11/02/2025 03:42 pm