ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಆಸ್ತಿಗಳ ನೋಂದಣಿಗೆ ಇ - ಖಾತೆ ಕಡ್ಡಾಯ ಮಾಡಿದೆ. ಆಸ್ತಿಗಳ ಮಾರಾಟ ಮಾಡುವ ಸಮಯದಲ್ಲಿ ಯಾವುದೇ ಅಕ್ರಮ ನಡೆಯದಂತೆ ಬ್ರೇಕ್ ಹಾಕಲು ಹಾಗೂ ಮೋಸ ತಡೆಗಟ್ಟುವುದು ಇ- ಖಾತೆ ಮುಖ್ಯ ಉದ್ದೇಶವಾಗಿದೆ.
ಆದರೆ ಇದೀಗ ಇ- ಖಾತಾ ಸಿಗದೇ ಆಸ್ತಿ ಮಾಲೀಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಬಿಬಿಎಂಪಿ ಮಾತ್ರ ಎಲ್ಲಾ ಆಸ್ತಿಗಳ ಖಾತಾಗಳನ್ನು ಡಿಜಿಟಲೀಕರಣ ಮಾಡಿದೆ. ಜನರು ಅಂತಿಮ ಇ - ಖಾತಾ ಪಡೆಯುವುದಕ್ಕೆ ಮುಂದಾಗುತ್ತಿಲ್ಲ ಎನ್ನುತ್ತಿದ್ದಾರೆ. ಆದ್ರೆ ವಾಸ್ತವವಾಗಿ ಬಿಬಿಎಂಪಿಯು ಇ - ಖಾತಾ ವಿತರಣೆಗೆ ಸಿದ್ಧತೆ ಇಲ್ಲದೇ ಅನುಷ್ಠಾನ ಮಾಡಿದೆ ಎಂದು ಆರೋಪ ಮಾಡುತ್ತಿದ್ದಾರೆ.
ಒಟ್ಟಾರೆ, ಇ - ಖಾತೆಯಿಂದ ಜನರು ಬಿಬಿಎಂಪಿ ಕಂದಾಯ ಕಚೇರಿಗೆ ಅಲೆದಾಡುವಂತಾಗಿದೆ. ಇದಕ್ಕೆ ಉತ್ತರ ಬಿಬಿಎಂಪಿಯೇ ನೀಡಬೇಕಾಗಿದೆ.
PublicNext
11/02/2025 07:34 pm