ಬೆಂಗಳೂರು: ತನ್ನ 19 ವರ್ಷಕ್ಕೆ ಮಚ್ಚು ಹಿಡಿದು ಕೊಲೆ ಮಾಡಿ 14 ವರ್ಷ ತಲೆ ಮರೆಸಿಕೊಂಡಿದ್ದ ಆರೋಪಿಯನ್ನ ಆರ್‌ಟಿ ನಗರ ಪೋಲೀಸರು ಬಂಧಿಸಿದ್ದು, ಹಳೆ ಸುದ್ದಿ. ಆದ್ರೆ ಆತ 14 ವರ್ಷ ತಲೆ ಮರೆಸಿಕೊಂಡಿದ್ದೆ ರೋಚಕ.
ಕೊಲೆ ಮಾಡಿದ್ದ ದಿನವೇ ಆ ಆರೋಪಿ ಅರೆಸ್ಟ್ ಆಗಿ ಶಿಕ್ಷೆ ಆಗಿದ್ರೂ ಈ ವೇಳೆಗೆ ಶಿಕ್ಷೆ ಅವಧಿ ಮುಗಿಯುತ್ತಿತ್ತು. ಆದ್ರೆ ಪೊಲೀಸರ ಮೇಲಿನ ಭಯಕ್ಕೆ ಆರೋಪಿ ತಲೆ ಮರೆಸಿಕೊಂಡಿದ್ದು ಬರೋಬ್ಬರಿ 14 ವರ್ಷ.
14 ವರ್ಷದ ಬಳಿಕ ಕೊಲೆ ಕೇಸ್ನಲ್ಲಿ ಪ್ರಮುಖ ಆರೋಪಿ ಜಾನ್ (32) ಎಂಬಾತನನ್ನ ಆರ್‌ಟಿ ನಗರ ಪೊಲೀಸರು ಬಂಧಿಸಿದ್ದಾರೆ. ತಿರುಪತಿ, ಹೊಸಕೋಟೆ ಮೈಸೂರು, ಆಂಧ್ರ ಅಂತ ಊರುಸುತ್ತಿದ್ದ ಆರೋಪಿ 13 ವರ್ಷ ಮೊಬೈಲ್‌ನ್ನೇ ಯೂಸ್ ಮಾಡಿರ್ಲಿಲ್ವಂತೆ.
ಪೊಲೀಸರು ಇವತ್ತು ಬರ್ತಾರೆ ನಾಳೆ ಬರ್ತಾರೆ ಅಂತ ಅವರ ದಾರಿಯನ್ನೆ ಕಾಯ್ತಿದ್ನಂತೆ. ಹೊಟೇಲ್ ಮತ್ತು ಲೋಡ್ ಅನ್ ಲೋಡ್ ಕೆಲಸ ಮಾಡಿಕೊಂಡಿದ್ದ ಆರೋಪಿ ಜಾನ್, 13 ವರ್ಷ ಮೊಬೈಲ್ ಬಿಟ್ಟಿದ್ದವ ಕಳೆದ ಒಂದು ವರ್ಷದ ಹಿಂದೆ ಮೊಬೈಲ್ ಖರೀದಿ ಮಾಡಿದ್ನಂತೆ, ಅದು ತಾಯಿ ಆಧಾರ್ ಕಾರ್ಡ್ನಿಂದ ಸಿಮ್ ಖರೀದಿಸಿದ್ನಂತೆ ಇದೇ ಮೊಬೈಲ್ ಜಾನ್ ಖಾಕಿ ಕೈಗೆ ಲಾಕ್ ಆಗಲು ಕಾರಣವಾಗಿದೆ.
ಹಳೇ ಕೇಸ್ ಪತ್ತೆಕಾರ್ಯ ಶರು ಮಾಡಿದ್ದ ಪೊಲೀಸರಿಗೆ ಜಾನ್ ಜೊತೆಗೆ ಕೇಸ್‌ನಲ್ಲಿದ್ದವರ ವಿಚಾರಣೆ ನಡೆಸಿದ್ದಾರೆ. ಆರೋಪಿ ಜಾನ್ ಜೊತೆಗಿದ್ದ ಸಹ ಆರೋಪಿಗಳ ಕೊಟ್ಟ ಮಾಹಿತಿ ಮೇರೆಗೆ ಜಾನ್ ಪೋಷಕರ ಆಧಾರ್ ಮಾಹಿತಿ ಪಡೆದಿದ್ರು. ತಾಯಿ ಆಧಾರ್ ನಿಂದ ವರ್ಷದ ಹಿಂದೆ ಸಿಮ್ ಖರೀದಿ ಮಾಹಿತಿ ಲಭ್ಯವಾಗಿದೆ.
ಆದ್ರೆ ಖರೀದಿ ಮಾಡಿದ ಸಿಮ್ ಜಾನ್ ಮನೆಯವರು ಯೂಸ್ ಮಾಡ್ತಿರ್ಲಿಲ್ಲ, ಸಿಮ್ ಬೆನ್ನತ್ತಿ ಹೋದಾಗ ಜಾನ್ ಸುಳಿವು ಪತ್ತೆಯಾಗಿದೆ. 2011 ಆಗಸ್ಟ್ 22ರಂದು ಆರ್.ಟಿ ನಗರ ಠಾಣೆ ವ್ಯಾಪ್ತಿಯಲ್ಲಿ ಚೇತನ್(20) ಹತ್ಯೆಯಾಗಿತ್ತು. ಆರ್.ಟಿ ನಗರದ ಕೆಂಪೇಗೌಡ ಕಾಲೋನಿಯ 1ನೇ ಮುಖ್ಯರಸ್ತೆಯಲ್ಲಿ ಚಾಕುನಿಂದ ಇರಿದು ಕೊಂದಿದ್ರು.
ಮೃತ ಚೇತನ್ ತಂದೆ ನೀಡಿದ ದೂರಿನಂತೆ 4 ಜನರ ವಿರುದ್ಧ ಕೇಸ್ ದಾಖಲಿಸಿ ಕೊಂಡಿದ್ದ ಪೊಲೀಸರು, ಪ್ರಕರಣದ ಮೊದಲ ಆರೋಪಿ ಜಾನ್ ಹೊರತುಪಡಿಸಿ ಉಳಿದವರನ್ನ ಬಂಧಿಸಿದ್ರು. ಕೋರ್ಟ್ ನಿಂದ 20 ಬಾರಿ ವಾರೆಂಟ್ ಜಾರಿಯಾಗಿದ್ರು ಜಾನ್ ಪತ್ತೆಯಾಗಿರ್ಲಿಲ್ಲ.
ಕೊನೆಗೆ ತಾಯಿ ಆಧಾರ್ ಕಾರ್ಡ್ ನಿಂದ ಜಾನ್ ಪತ್ತೆ ಮಾಡಿರೋ ರವೀಂದ್ರನಾಥ ಟ್ಯಾಗೂರ್ ನಗರ ಪೊಲೀಸರು ಸದ್ಯ ಆರೋಪಿಯನ್ನ ಜೈಲಿಗೆ ಕಳುಹಿಸಿದ್ದಾರೆ.
PublicNext
11/02/2025 09:33 am