ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆ ಖಂಡಿಸಿ ಪ್ರಯಾಣಿಕರು ಮಾದವರ ಮೆಟ್ರೋ ನಿಲ್ದಾಣದಲ್ಲಿ ಧರಣಿ ನಡೆಸಿದ್ದಾರೆ. ಈ ವೇಳೆ ಮಾದವಾರದ ಬಳಿ ಪ್ರಯಾಣಿಕರನ್ನ ಮೆಟ್ರೋ ಸಿಬ್ಬಂದಿ ಕೂಡಿಹಾಕಿದ ಅಮಾನವೀಯ ಘಟನೆ ನಡೆದಿದೆ.
ಪ್ರತಿಭಟನೆ ವೇಳೆ ಮುತ್ತಿಗೆ ಹಾಕಲು ಯತ್ನಿಸಿದಕ್ಕೆ ಪ್ರಯಾಣಿಕರನ್ನ ಹೊರಗೆ ಬಿಡಲು ಸಿಬ್ಬಂದಿ ಅಸಡ್ಡೆ ತೋರಿದ್ದಾರೆ. ಅರ್ಧ ಡೋರ್ ತಗ್ಗಿಸಿ ಕಳ್ಳರಂತೆ ಪ್ರಯಾಣಿಕರನ್ನ ಸಿಬ್ಬಂದಿ ಹೊರ ಬಿಡುತ್ತಿದ್ದು, ಮೆಟ್ರೋ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೇ ಮಾದವಾರದ ಮೆಟ್ರೋ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ ಪ್ರಯಾಣಿಕರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ.
PublicNext
11/02/2025 11:40 am