ಗ್ವಾಟೆಮಾಲಾ : ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಸೋಮವಾರ ಬೆಳಿಗ್ಗೆ ಬಸ್‌ವೊಂದು ಸೇತುವೆಯಿಂದ ಉರುಳಿಬಿದ್ದ ಪರಿಣಾಮ 55ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
75 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಸೇತುವೆಯಿಂದ ಉರುಳಿ ಬಿದ್ದಿದ್ದು, ಮೃತಪಟ್ಟವರಲ್ಲಿ ಮಕ್ಕಳು ಸೇರಿದ್ದಾರೆ. ಎಂದು ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ 55 ಮೃತದೇಹಗಳು ಪತ್ತೆಯಾಗಿವೆ. ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಗ್ನಿಶಾಮಕ ದಳದ ವಕ್ತಾರ ಎಡ್ವಿನ್ ವಿಲ್ಲಾಗ್ರಾನ್ ಹೇಳಿದ್ದಾರೆ.
ಬಸ್ ಪ್ರೊಗ್ರೆಸೊದಿಂದ ಹೊರಟು ಗ್ವಾಟೆಮಾಲಾ ಬಳಿ ಬಂದ ವೇಳೆ 115 ಅಡಿ ಎತ್ತರದ ಸೇತುವೆಯಿಂದ ಕೊಳಚೆ ನೀರಿಗೆ ಬಿದ್ದಿದೆ. ಈ ವೇಳೆ ಅರ್ಧ ಬಸ್ ಕೊಳಚೆ ನೀರಿನಲ್ಲಿ ಮುಳುಗಿತ್ತು ಎಂದು ವಿಲ್ಲಾಗ್ರಾನ್ ತಿಳಿಸಿದ್ದಾರೆ.
PublicNext
11/02/2025 09:56 am