", "articleSection": "Politics,Business,International", "image": { "@type": "ImageObject", "url": "https://prod.cdn.publicnext.com/s3fs-public/387839-1739189927-Untitled-design---2025-02-10T174845.153.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಾಷಿಂಗ್ಟನ್:‌ ವ್ಯಾಪಾರ ನೀತಿಯಲ್ಲಿ ಮತ್ತೊಂದು ದೊಡ್ಡ ಬದಲಾವಣೆ ತಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌, ಎಲ್ಲಾ ಉಕ್ಕು ಮತ್ತು ಅಲ್ಯೂಮಿನಿಯಂ ಆಮದುಗ...Read more" } ", "keywords": "Global Trade War, Trump Imposes Tariff, Steel Import Tariff, Aluminum Import Tariff, 25% Tariff, US Trade Policy, International Trade Dispute, Trump Trade War. ,,Politics,Business,International", "url": "https://publicnext.com/node" } ಜಾಗತಿಕ ವ್ಯಾಪಾರ ಯುದ್ಧ ಮುಂದುವರೆಸಿದ ಟ್ರಂಪ್‌ : ಸ್ಟೀಲ್‌, ಅಲ್ಯೂಮಿನಿಯಂ ಆಮದಿನ ಮೇಲೆ ಶೇ.25ರಷ್ಟು ಸುಂಕ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾಗತಿಕ ವ್ಯಾಪಾರ ಯುದ್ಧ ಮುಂದುವರೆಸಿದ ಟ್ರಂಪ್‌ : ಸ್ಟೀಲ್‌, ಅಲ್ಯೂಮಿನಿಯಂ ಆಮದಿನ ಮೇಲೆ ಶೇ.25ರಷ್ಟು ಸುಂಕ

ವಾಷಿಂಗ್ಟನ್:‌ ವ್ಯಾಪಾರ ನೀತಿಯಲ್ಲಿ ಮತ್ತೊಂದು ದೊಡ್ಡ ಬದಲಾವಣೆ ತಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌, ಎಲ್ಲಾ ಉಕ್ಕು ಮತ್ತು ಅಲ್ಯೂಮಿನಿಯಂ ಆಮದುಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸುವುದಾಗಿ ಡೊನಾಲ್ಡ್‌ ಟ್ರಂಪ್ ಘೋಷಿಸಿದ್ದಾರೆ.

ನಿನ್ನೆ ನ್ಯೂ ಓರ್ಲಿಯನ್ಸ್‌ನಲ್ಲಿ ಮಾತನಾಡಿದ ಟ್ರಂಪ್‌, ಉಕ್ಕು ಮತ್ತು ಅಲ್ಯೂಮಿನಿಯಂ ಮೇಲಿನ ನೂತನ ಸುಂಕ ನೀತಿ ಫೆ.11ರಿಂದ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇತರ ದೇಶಗಳು ವಿಧಿಸುವ ಸುಂಕ ದರಗಳಿಗೆ ಪ್ರತಿಯಾಗಿ ಅಮೆರಿಕ ಕೂಡ ಅದೇ ದರದ ಸುಂಕ ವಿಧಿಸುತ್ತದೆ. ಈ ನೀತಿಯಲ್ಲಿ ಅಮೆರಿಕ ಯಾವುದೇ ರಾಜಿಗೆ ಸಿದ್ಧವಿಲ್ಲ.." ಎಂದು ಅಮೆರಿಕ ಅಧ್ಯಕ್ಷರು ಘೋಷಿಸಿದ್ದಾರೆ.

2016-2020ರ ತಮ್ಮ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ, ಟ್ರಂಪ್ ಉಕ್ಕಿನ ಮೇಲೆ ಶೇ.25 ಮತ್ತು ಅಲ್ಯೂಮಿನಿಯಂ ಮೇಲೆ ಶೇ.10ರಷ್ಟು ಸುಂಕ ವಿಧಿಸಿದ್ದರು. ಆದರೆ ನಂತರ ಕೆನಡಾ, ಮೆಕ್ಸಿಕೋ ಮತ್ತು ಬ್ರೆಜಿಲ್ ಸೇರಿದಂತೆ ಹಲವಾರು ವ್ಯಾಪಾರ ಪಾಲುದಾರರಿಗೆ ಸುಂಕ ರಹಿತ ಕೋಟಾಗಳನ್ನು ನೀಡಿದ್ದರು.

ಅಧಿಕೃತ ಮಾಹಿತಿಯ ಪ್ರಕಾರ, ಕೆನಡಾ, ಬ್ರೆಜಿಲ್ ಮತ್ತು ಮೆಕ್ಸಿಕೊ ದೇಶಗಳು ಅಮೆರಿಕಕ್ಕೆ ಉಕ್ಕನ್ನು ಆಮದು ಮಾಡುತ್ತವೆ. ಇದರ ನಂತರ ದಕ್ಷಿಣ ಕೊರಿಯಾ ಮತ್ತು ವಿಯೆಟ್ನಾಂ ದೇಶಗಳಿವೆ.

ವಿಶ್ವ ವ್ಯಾಪಾರ ಸಂಸ್ಥೆಯ ಮಾಹಿತಿಯ ಪ್ರಕಾರ, ಅಮೆರಿಕದ ವ್ಯಾಪಾರ ತೂಕದ ಸರಾಸರಿ ಸುಂಕ ದರ ಸುಮಾರು ಶೇ.2.2ರಷ್ಟಿದೆ. ಭಾರತಕ್ಕೆ ಶೇ.12, ಬ್ರೆಜಿಲ್‌ಗೆ ಶೇ.6.7, ವಿಯೆಟ್ನಾಂಗೆ ಶೇ.5.1 ಮತ್ತು ಯುರೋಪಿಯನ್ ಒಕ್ಕೂಟದ ದೇಶಗಳಿಗೆ ಶೇ.2.7 ರಷ್ಟು ಸುಂಕ ದರಗಳಿವೆ.

ಇನ್ನು ಟ್ರಂಪ್‌ ಅವರ ನೂತನ ನಿರ್ಣುಯದಿಂದಾಗಿ ಜಾಗತಿಕ ವ್ಯಾಪಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಹೊಸ ನೀತಿಯಿಂದ ಯಾವ ದೇಶಗಳಿಗೆ ಲಾಭ ಮತ್ತು ಯಾವ ದೇಶಗಳಿಗೆ ನಷ್ಟವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Edited By : Abhishek Kamoji
PublicNext

PublicNext

10/02/2025 05:49 pm

Cinque Terre

18.26 K

Cinque Terre

0

ಸಂಬಂಧಿತ ಸುದ್ದಿ