", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/387839-1739202022-Untitled-design---2025-02-10T211018.768.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಭರ್ಜರಿ ಗೆಲುವ ಸಾಧಿಸಿದ ಬೆನ್ನಲ್ಲೇ ಕರ್ನಾಟಕ ಬಿಜೆಪಿ ನಾಯಕರಿಗೆ ಮಾಜಿ...Read more" } ", "keywords": "The BJP's victory in Delhi after 27 years has sent a strong message to Karnataka BJP leaders, particularly those vying for the state president position ¹. The party's win in Delhi is seen as a lesson for Karnataka BJP leaders, who are reportedly at odds over the state presidency. ,,Politics,Government", "url": "https://publicnext.com/node" } ಬೆಂಗಳೂರು : ದೆಹಲಿಯಲ್ಲಿ ಬಿಜೆಪಿ ಗೆಲ್ಲುತ್ತಿದ್ದಾಗೇ ಕರ್ನಾಟಕದ ಬಿಜೆಪಿ ನಾಯಕರಿಗೆ ಡಿವಿಎಸ್ ಪಾಠ..!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ದೆಹಲಿಯಲ್ಲಿ ಬಿಜೆಪಿ ಗೆಲ್ಲುತ್ತಿದ್ದಾಗೇ ಕರ್ನಾಟಕದ ಬಿಜೆಪಿ ನಾಯಕರಿಗೆ ಡಿವಿಎಸ್ ಪಾಠ..!

ಬೆಂಗಳೂರು : ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಭರ್ಜರಿ ಗೆಲುವ ಸಾಧಿಸಿದ ಬೆನ್ನಲ್ಲೇ ಕರ್ನಾಟಕ ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಡಿ.ವಿ ಸದಾನಂದ ಗೌಡ ಪಾಠ ಮಾಡಿದ್ದಾರೆ. ಮಾಧ್ಯಮ ಪ್ರಕಟಣೆ ಮೂಲಕ ಸ್ವಪಕ್ಷೀಯರಿಗೆ ಡಿವಿಎಸ್ ತಿಳಿ ಹೇಳಿದ್ದಾರೆ.

ಸದಾನಂದ ಗೌಡರು ಹೊರಡಿಸಿರುವ ಪ್ರಕಟಣೆಯ ಪ್ರಮುಖ ಅಂಶ ಹೀಗಿದೆ.. !

ಕರ್ನಾಟಕದ ಬಿಜೆಪಿ ಮುಂದಿನ ಸವಾಲುಗಳ ಬಗ್ಗೆ ಉಲ್ಲೇಖಿಸಿರುವ ಅವರು, ಪಕ್ಷದ ಸಕಲ ಶ್ರಮ, ಸಂಘಟನೆ ಸಾಮರ್ಥ್ಯದಿಂದ ದೆಹಲಿಯಲ್ಲಿ ಬಿಜೆಪಿ ಜಯ ಸಾಧಿಸಿದೆ, ಇದಕ್ಕೆ ವಿರುದ್ಧವಾಗಿ ಕರ್ನಾಟಕದಲ್ಲಿ ಬಿಜೆಪಿ ಇನ್ನೂ ಆಂತರಿಕ‌ ಕಲಹ ಮತ್ತು ಸಂಘಟನಾ ದೌರ್ಬಲ್ಯದಿಂದ ಬಳಲುತ್ತಿದೆ ಎಂದು ಅಸಮಾಧಾನ ಹೊರ ಹಾಕಿರುವ ಅವರು, ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳು, ಗುಂಪು ರಾಜಕಾರಣದಿಂದ ಕಾರ್ಯಕರ್ತರಲ್ಲಿ ಅಸಮಧಾನ ಮೂಡಿದೆ. ದೆಹಲಿಯಲ್ಲಿ ನಮ್ಮ ಬಿಜೆಪಿ ಪಕ್ಷ ಶಿಸ್ತು ಮತ್ತು ಏಕತೆಯ ಕಾರ್ಯಪದ್ಧತಿ ಅನುಸರಿಸಿದೆ.

ಕರ್ನಾಟಕದಲ್ಲಿ ಕೆಲವು ನಾಯಕರು ತಮ್ಮ ಸ್ವಂಯ ರಾಜಕೀಯ ಲಾಭಕ್ಕಾಗಿ ಒಡಕ್ಕುಂಟು ಮಾಡ್ತಿದ್ದಾರೆ, ಇದು ಗಂಭೀರ ಸಮಸ್ಯೆ ಇದರಿಂದ ಕಾರ್ಯಕರ್ತರು ಮತ್ತು ಮತದಾರರಲ್ಲಿ ಅಸ್ಥಿತೆ ಉಂಟಾಗಿದೆ, ಈ ಸನ್ನಿವೇಶ ಸರಿಪಡಿಸುವ ಕೆಲಸ ಆಗದಿದ್ದರೆ ಮುಂದಿನ ಚುನಾವಣೆಯಲ್ಲಿ ಕಠಿಣ ಸವಾಲು ಅನುಸರಿಸಬಹುದು.

ಪಕ್ಷದ ಶಕ್ತಿ ಪುನರ್ ನಿರ್ಮಿಸಲು ತಕ್ಷಣದ ಕ್ರಮ ಅಗತ್ಯ,ಪಕ್ಷದ ಯಶಸ್ಸು ಯಾವುದೇ ಒಬ್ಬ ವ್ಯಕ್ತಿಯ ಸಾಧನೆ ಅಲ್ಲ ಇದು ಶ್ರದ್ಧೆ, ಶ್ರಮ ಮತ್ತು ಸಮೂಹ ಶಕ್ತಿಯ ಪ್ರತೀಕ.

ರಾಜ್ಯದಲ್ಲಿ ಪಕ್ಷ ಮತ್ತಷ್ಟು ಬಲಿಷ್ಟಗೊಳ್ಳಬೇಕಾದರೆ ಎಲ್ಲ ನಾಯಕರೂ ಒಗ್ಗೂಡಬೇಕು,ಸಂಘಟನಾ ಶಕ್ತಿ ಪುನರ್ ನಿರ್ಮಿಸಬೇಕು ಮತ್ತು‌ ಗಟ್ಟಿತನ ಅನುಸರಿಸಬೇಕು, ಪಕ್ಷದ ಹಿತಾಸಕ್ತಿ ಮೊದಲಿಟ್ಟು, ಭಿನ್ನಾಭಿಪ್ರಾಯಗಳನ್ನು ಬದಿಗಿಡಬೇಕು, ಸಹಕಾರ ಮತ್ತು ಏಕತೆ ತರುವ ಹಂತ ಕಡ್ಡಾಯವಾಗಿದೆ.

ದೆಹಲಿ ಗೆಲುವು ನಮಗೆ ಪಾಠ ಆಗಬೇಕು,ಒಳಜಗಳ ಮರೆತು ಕಾರ್ಯಪದ್ಧತಿಯಲ್ಲಿ ಸ್ಪಷ್ಟತೆ ಮತ್ತು ಶಿಸ್ತು ಇರಬೇಕು, ಕರ್ನಾಟಕದ ಜನತೆ ಬಿಜೆಪಿ ಬೆಂಬಲಿಸಲು ಸಿದ್ಧರಿದ್ದಾರೆ. ಜನರ ವಿಶ್ವಾಸ ಸಂಪಾದಿಸಲು ಪಕ್ಷದ ಒಳಾಂಗಣ ಶುದ್ಧಗೊಳಿಸಿ ಬಲಿಷ್ಠಗೊಳಿಸಬೇಕಿದೆ.

Edited By : Abhishek Kamoji
PublicNext

PublicNext

10/02/2025 09:10 pm

Cinque Terre

35.54 K

Cinque Terre

3

ಸಂಬಂಧಿತ ಸುದ್ದಿ