", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/462628-1739016085-WhatsApp-Image-2025-02-08-at-5.31.00-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಕೆಸಿನೋದಲ್ಲಿ ಹಣ ಹೂಡಿಕೆ ಮಾಡಿದ್ರೆ ಒಳ್ಳೆ ಲಾಭ ಬರುತ್ತೆ ಅಂತ ಆಸೆ ತೋರಿಸಿ ಕೋಟ್ಯಾಂತರ ರೂಪಾಯಿ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗ...Read more" } ", "keywords": "Bengaluru, casino investment scam, celebrity drug case, fraud, cheating, crime, Karnataka news, Indian news, Bengaluru events, casino news, investment scam, financial fraud, celebrity news, drug case, police investigation, crime news, scam news, Bengaluru police, Karnataka police, Indian police, law and order, justice, court case, legal news, Bengaluru crime, Karnataka crime, Indian crime, casino scandal, investment fraud, celebrity scandal, drug abuse, narcotics case,Bangalore,Bangalore-Rural,Crime,Law-and-Order", "url": "https://publicnext.com/node" } ಬೆಂಗಳೂರು: ಕೆಸಿನೋದಲ್ಲಿ ಹಣ ಹೂಡಿಕೆ ನೆಪದಲ್ಲಿ ಕೋಟಿ ಕೋಟಿ ವಂಚನೆ..! ಸೆಲೆಬ್ರಿಟಿ ಡ್ರಗ್ ಕೇಸ್ ಆರೋಪಿ ಮೇಲೆ ಮತ್ತೊಂದು ಪ್ರಕರಣ…!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆಸಿನೋದಲ್ಲಿ ಹಣ ಹೂಡಿಕೆ ನೆಪದಲ್ಲಿ ಕೋಟಿ ಕೋಟಿ ವಂಚನೆ..! ಸೆಲೆಬ್ರಿಟಿ ಡ್ರಗ್ ಕೇಸ್ ಆರೋಪಿ ಮೇಲೆ ಮತ್ತೊಂದು ಪ್ರಕರಣ…!

ಬೆಂಗಳೂರು: ಕೆಸಿನೋದಲ್ಲಿ ಹಣ ಹೂಡಿಕೆ ಮಾಡಿದ್ರೆ ಒಳ್ಳೆ ಲಾಭ ಬರುತ್ತೆ ಅಂತ ಆಸೆ ತೋರಿಸಿ ಕೋಟ್ಯಾಂತರ ರೂಪಾಯಿ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಬಣ್ಣಬಣ್ಣದ ಮಾತನಾಡಿ ಬೆಂಗಳೂರಿನ ಉದ್ಯಮಿಗೆ 25.5 ಕೋಟಿ ಉಂಡೆನಾಮ ಹಾಕಿರೋದಾಗಿ ಬಸವೇಶ್ವರ ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಸ್ಯಾಂಡಲ್ ವುಡ್ ಡ್ರಗ್ ಕೇಸ್ ಆರೋಪಿಯಾಗಿದ್ದ ರಾಹುಲ್ ತೋನ್ಸೆಯಿಂದ ಮಹಾಮೋಸ ಆಗಿದೆ ಅಂತ ಆರೋಪ ಕೇಳಿ ಬಂದಿದ್ದು, ರಾಹುಲ್ ತೋನ್ಸೆ, ಅತನ ಅಪ್ಪ ರಾಮಕೃಷ್ಣ, ತಾಯಿ ರಾಜೇಶ್ವರಿ ಸೇರಿ ಐವರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ರಾಹುಲ್ ತೋನ್ಸೆ ಅಪ್ಪ ರಾಮಕೃಷ್ಣ ರಾವ್ A1 ಆರೋಪಿ. ಈ ಹಿಂದೆ ಇಂದಿರಾನಗರದಲ್ಲಿ ರಾಹುಲ್ ತೋನ್ಸೆ ವಿರುದ್ಧ ಸಂಜನಾ ಗಲ್ರಾನಿ ದೂರು ನೀಡಿದ್ರು. ಹೂಡಿಕೆ‌ ನೆಪದಲ್ಲಿ ರಾಹುಲ್ ವಂಚನೆ ಮಾಡಿದ್ದಾಗಿ ನಟಿ ಸಂಜನಾ ಗಲ್ರಾನಿ ದೂರು ನೀಡಿದ್ರು‌. ಸದ್ಯ ಬಸವೇಶ್ವರ ನಗರ ನಿವಾಸಿ ಉದ್ಯಮಿ‌ ವಿವೇಕ್ ಹೆಗ್ಡೆ ಹಾಗೂ ಅವರ ಸ್ನೇಹಿತರಿಗೆ 25.5 ಕೋಟಿ ಮೋಸ ಆಗಿದೆ ಅಂತ‌ ದೂರು ದಾಖಲಾಗಿದೆ.

ಪ್ರಕರಣ ಏನು ಅಂತ ನೋಡೋದಾದ್ರೆ. 07.02.2023ರಂದು ದೂರುದಾರ ವಿವೇಕ್ ಹೆಗ್ಡೆಗೆ ಸ್ನೇಹಿತರ ಮೂಲಕ‌ ರಾಮಕೃಷ್ಣ ರಾವ್ ಪರಿಚಯವಾಗಿದೆ. ಉದ್ಯಮಿ ಕಚೇರಿಯಲ್ಲಿ ಸಾಲ ನೀಡುವ ಬಗ್ಗೆ ಸಭೆ ನಡೆಸಿ, ಶ್ರೀಲಂಕಾ ಮತ್ತು ಮಧ್ಯಪ್ರಾಚ್ಯದಲ್ಲಿ ಹಲವು ವ್ಯಾಪಾರಗಳಲ್ಲಿ ಲಾಭವಿದೆ ಅಂದು ನಂಬಿಸಿದ್ರಂತೆ. ಮಗಳು ರಕ್ಷಾ, ಅಳಿಯ ಚೇತನ್ ಮತ್ತು ಮಗ ರಾಹುಲ್ ಕೆಸಿನೋ ವ್ಯವಹಾರ ನಿರ್ವಹಿಸುತ್ತಿದ್ದಾರೆ ಅಂತ ರಾಮಕೃಷ್ಣ ತಮ್ಮ ಮೊಬೈಲ್ ಮೂಲಕ ಮಗಳು ರಕ್ಷಾ ಮತ್ತು ಅಳಿಯ ಚೇತನ್ ಜೊತೆ ವಿವೇಕ್ ನ ಮಾತನಾಡಿಸಿದ್ರಂತೆ‌.

ಸಾಲದ ರೂಪದಲ್ಲಿ ನೀಡುವ ಹಣಕ್ಕೆ ಶೇ 4% ರಂತೆ ಬಡ್ಡಿ ನೀಡುವುದಾಗಿ ತಿಳಿಸಿದ್ದು, ಅಳಿಯ ಹಾಗೂ‌ ಮಗಳು ಶ್ರೀಲಂಕಾದ ಬೆಲ್ಲಾ ಜಿಯೋ ಎಂಬ ಕ್ಯಾಸಿನೋದಲ್ಲಿ ಟೇಬಲ್‌ ಹೊಂದಿದ್ದಾರೆ. ಅದನ್ನ ಮಗ ರಾಹುಲ್ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾನೆ ಎಂದು ನಮಗೆ ನಂಬಿಸಿದ್ರು.

ಹಲವು ಬಾರಿ ಫೋನ್ ನಲ್ಲಿ ಮಾತುಕತೆ ನಡೆಸಿ, ಹೆಚ್ಚಿನ ಬಡ್ಡಿ ನೀಡುವ ಭರವಸೆ ನೀಡಿದ್ರು. ಮೊದಲು ರಾಹುಲ್ ಖಾತೆಗೆ 30 ಲಕ್ಷ ಹಾಕಿದ್ರಂತೆ. ಇದಾದ ನಂತರ ವಿವೇಕ್ ಗೆ ಶ್ರೀಲಂಕಾಗೆ ಟಿಕೆಟ್ ಮತ್ತು ವಾಸ್ತವ್ಯದ ವ್ಯವಸ್ಥೆ ಮಾಡಿದ್ದು ಈ ವೇಳೆ ವಿವೇಕ್ ಮತ್ತು ನವೀನ್ ಚಂದ್ರ ಕೋಠಾರಿ ಶ್ರೀಲಂಕಾಕ್ಕೂ‌ ಹೋಗಿದ್ರಂತೆ. ಶ್ರೀಲಂಕಾದಲ್ಲಿ ರಾಹುಲ್ ನೋಡಿಕೊಳ್ಳೋ ಬೆಲ್ಲಾ, ಜಿಯೋ ಕ್ಯಾಸಿನೋಗೆ ಕರೆದೊಯ್ದಿದ್ದು ಟೇಬಲ್ ಗಳನ್ನ ತೋರಿಸಿ ಇಲ್ಲಿ ಹಣ ಮಾಡಬಹುದು ಎಂದು ನಂಬಿಸಿದ್ನಂತೆ. ಈ ರೀತಿ ಬಣ್ಣಬಣ್ಣದ ನಾಟಕವಾಡಿ ಬರೋಬ್ಬರಿ 3.5 ಕೋಟಿ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ. ಜೊತೆಗೆ ದೂರುದಾರ ವಿವೇಕ್ ಹೆಗ್ಡೆ ಸ್ನೇಹಿತರ ಮೂಲಕ 22 ಕೋಟಿ ಹಾಕಿಸಿಕೊಂಡು ಪಂಗನಾಮ ಹಾಕಿ ಹಣ ವಾಪಸ್ ಕೇಳಿದಾಗ ಫೋನ್ ನಂಬರ್ ಬ್ಲಾಕ್ ಮಾಡಿದ್ದಾರೆ ಎಂದು ದೂರಿದ್ದಾರೆ. ಸದ್ಯ ಬಸವೇಶ್ವರ ನಗರ ಪೊಲೀಸ್ರು ಪ್ರಕರಣ ದಾಖಸಿಕೊಂಡು ತನಿಖೆ ಮಾಡಿ ಪ್ರಕರಣದ ಪ್ರಮುಖ ಆರೋಪಿ ರಾಮಕೃಷ್ಣನನ್ನ ಬಂಧಿಸಿದ್ದಾರೆ. ವಿದೇಶದಲ್ಲಿರೋ ರಾಹುಲ್ ನ‌ ಬಂಧನಕ್ಕೂ ಪೊಲೀಸ್ರು ಮುಂದಾಗಿದ್ದಾರೆ.

Edited By :
PublicNext

PublicNext

08/02/2025 05:32 pm

Cinque Terre

12.72 K

Cinque Terre

0

ಸಂಬಂಧಿತ ಸುದ್ದಿ