", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/52563-1738988453-6ccab51e-5cfb-4763-848e-5d6f0992cafd.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಡಿ.ಕೆ. ಸುರೇಶ್ ತಂಗಿ ಅಂತ ಐಶ್ವರ್ಯಾ ಗೌಡಳಿಂದ ಕೋಟಿ-ಕೋಟಿ ವಂಚನೆ ಕೇಸ್ ಗಳ ಪಟ್ಟಿಗೆ ಮತ್ತೊಂದು ಎಫ್ ಐ ಆರ್ ಸೇರಿಕೊಂಡಿದೆ‌. ಪೊಲೀ...Read more" } ", "keywords": "Another FIR against Aishwarya; Which police officer gave Aishwarya a CDR?,Bangalore,Bangalore-Rural,Crime,Law-and-Order", "url": "https://publicnext.com/node" } ಐಶ್ವರ್ಯ ಮೇಲೆ ಮತ್ತೊಂದು ಎಫ್ ಐ ಆರ್ ; ಐಶ್ಚರ್ಯ ಸಿಡಿಆರ್ ಕೊಟ್ಡಿದ್ದು ಯಾವ ಪೊಲೀಸ್ರು?
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಶ್ವರ್ಯ ಮೇಲೆ ಮತ್ತೊಂದು ಎಫ್ ಐ ಆರ್ ; ಐಶ್ಚರ್ಯ ಸಿಡಿಆರ್ ಕೊಟ್ಡಿದ್ದು ಯಾವ ಪೊಲೀಸ್ರು?

ಬೆಂಗಳೂರು : ಡಿ.ಕೆ. ಸುರೇಶ್ ತಂಗಿ ಅಂತ ಐಶ್ವರ್ಯಾ ಗೌಡಳಿಂದ ಕೋಟಿ-ಕೋಟಿ ವಂಚನೆ ಕೇಸ್ ಗಳ ಪಟ್ಟಿಗೆ ಮತ್ತೊಂದು ಎಫ್ ಐ ಆರ್ ಸೇರಿಕೊಂಡಿದೆ‌. ಪೊಲೀಸರ ತನಿಖೆ ವೇಳೆ ಮತ್ತೊಂದು ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ‌.

ವಂಚನೆ ಮಾಡಲು ಐಶ್ವರ್ಯಾ ಹಿಡಿದ ಹಾದಿ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ಅಕ್ರಮವಾಗಿ ಹಲವು ವ್ಯಕ್ತಿಗಳ ಸಿಡಿಆರ್ ಪಡೆದುಕೊಂಡಿದ್ಳಂತೆ ಐಶ್ವರ್ಯಾ ಗೌಡ. ಐಶ್ವರ್ಯಾ ಮೊಬೈಲ್ ಡೇಟಾ ಎಕ್ಸ್ಟ್ರಾಕ್ಟ್ ವೇಳೆ ಸಿಡಿಆರ್ ಪಡೆದಿದ್ದು ಬಯಲಾಗಿದೆ. ಹೀಗಾಗಿ ಐಶ್ವರ್ಯಾ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ಮತ್ತೊಂದು ಎಫ್.ಐ.ಆರ್ ದಾಖಲಾಗಿದೆ.

ಪ್ರಕರಣದ ತನಿಖಾಧಿಕಾರಿ ಎಸಿಪಿ‌ ಭರತ್ ರೆಡ್ಡಿಯಿಂದ ದೂರಿನ ಮೇರೆಗೆ ಎಫ್ ಐ ಆರ್ ದಾಖಲಾಗಿದೆ. ಐಶ್ವರ್ಯಾ ಸಿಡಿಆರ್ ಆಟ ತನಿಖೆ ವೇಳೆ ಐಶ್ವರ್ಯಾಳ 5 ಮೊಬೈಲ್ ಹಾಗೂ ಆಕೆಯ ಪತಿಯ 2 ಫೋನ್ ವಶಕ್ಕೆ ಪಡೆಯಲಾಗಿತ್ತು.

ಆ ಮೊಬೈಲ್ ಗಳನ್ನ ಮಿರರ್ ಇಮೇಜಿಂಗ್ ಹಾಗೂ ಡೇಟಾ ಎಕ್ಸ್ಟ್ರಾಕ್ಟ್ಬ ಗೆ ನೀಡಲಾಗಿತ್ತು. ಕೋರ್ಟ್ ಒಪ್ಪಿಗೆ ಪಡೆದು ಪಶ್ಚಿಮ ಸೆನ್ ಠಾಣೆಗೆ ಕಳುಹಿಸಪಾಗಿತ್ತು. ಐಶ್ವರ್ಯಾ ಐಫೋನ್ ಡೇಟಾ ಎಕ್ಸ್ಟ್ರಾಕ್ಟ್ ವೇಳೆ ಶಾಕಿಂಗ್ ವಿಚಾರ ಬಯಲಾಗಿದ್ದು, ಅಕ್ರಮವಾಗಿ ಹಲವು ವ್ಯಕ್ತಿಗಳ ಸಿಡಿಆರ್ ಪಡೆದುಕೊಂಡಿರೋದು ತಿಳಿದು ಬಂದಿದೆ. ಅಪರಾಧ ಕೃತ್ಯದ ತನಿಖೆ ವೇಳೆ ತನಿಖಾಧಿಕಾರಿಗಳಿಗೆ ಮಾತ್ರ ಸಿಡಿಆರ್ ನೀಡಲಾಗುತ್ತೆ. ಅಪರಾಧ ಕೃತ್ಯ ಹೊರತು ಪಡಿಸಿ ಯಾರಿಗೂ ಖಾಸಗಿ ಡೇಟಾ ನೀಡುವಂತಿಲ್ಲ. ಆದರೆ ಅಕ್ರಮವಾಗಿ ಐಶ್ವರ್ಯಾ ಸಿಡಿಆರ್ ಪಡೆದುಕೊಂಡಿದ್ದು ಬಯಲಾಗಿದೆ‌.

ದೂರುದಾರೆ ಮಂಜುಳಾ ಪಾಟೀಲ್ ಸೇರಿ 4 ಜನರ ನಂಬರ್ ಸಿಡಿಆರ್ ಡೇಟಾ ಮೊಬೈಲ್‌ನಲ್ಲಿ ಪತ್ತೆಯಾಗಿದೆ‌. ಸಿಡಿಆರ್ ಮೂಲಕ ತನ್ನ ಎದುರಾಳಿಗಳು ಯಾರ ಜೊತೆ ಕಂಟ್ಯಾಕ್ಟ್ ಹೊಂದಿದ್ದರೆ ಅಂತ ತಿಳಿದುಕೊಳ್ತಿದ್ಳಂತೆ ಐಶ್ವರ್ಯ. ಐಶ್ವರ್ಯಾ ಜೊತೆಗೆ ಯಾವ ಪೊಕೀಸ್ ಅಧಿಕಾರಿ ಶಾಮೀಲಾಗಿದ್ರು? ಐಶ್ವರ್ಯಾ ಹಾಗೂ ಆಕೆಗೆ ಸಿಡಿಆರ್ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

Edited By : Nirmala Aralikatti
Kshetra Samachara

Kshetra Samachara

08/02/2025 09:51 am

Cinque Terre

3.18 K

Cinque Terre

0

ಸಂಬಂಧಿತ ಸುದ್ದಿ