", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/286525-1739013863-WhatsApp-Image-2025-02-08-at-4.53.56-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಅಂಗಡಿಯವರಿಗೆ ಚಾಕು ತೋರಿಸಿ ಸಿಗರೇಟ್‌ಗಾಗಿ ಬೆದರಿಸಿದ ಪುಂಡನನ್ನ ಆಡುಗೋಡಿ ಪೋಲೀಸ್ರು ಬಂಧಿಸಿದ್ದಾರೆ. ಜನವರಿ 4ರಂದು ಆಡುಗೋಡಿಯ ರಾ...Read more" } ", "keywords": " Bengaluru Crime, Cigarette Row, Police Encounter, Threat to Police, Crime in Bengaluru, Karnataka Crime News, Police vs Goon, Bengaluru Police Department, Law and Order, Smoking Menace, Youth Crime.,Bangalore,Bangalore-Rural,Crime", "url": "https://publicnext.com/node" }
ಬೆಂಗಳೂರು: ಅಂಗಡಿಯವರಿಗೆ ಚಾಕು ತೋರಿಸಿ ಸಿಗರೇಟ್‌ಗಾಗಿ ಬೆದರಿಸಿದ ಪುಂಡನನ್ನ ಆಡುಗೋಡಿ ಪೋಲೀಸ್ರು ಬಂಧಿಸಿದ್ದಾರೆ. ಜನವರಿ 4ರಂದು ಆಡುಗೋಡಿಯ ರಾಜೇಂದ್ರ ನಗರದ 80 ಅಡಿ ರಸ್ತೆಯ ಕಾಂಡಿಮೆಂಟ್‌ಗೆ ಬಂದ ಅದೇ ಏರಿಯಾದ ಗೌತಮ್ ಒಂದು ಪ್ಯಾಕ್ ಸಿಗರೇಟ್ ಮತ್ತು ಬೆಂಕಿ ಪೊಟ್ಟಣ ಕೇಳಿದ್ದಾನೆ.
ಸಿಗರೇಟ್ ಮತ್ತು ಬೆಂಕಿ ಪೊಟ್ಟಣ ಪಡೆದು ಹಣ ಕೊಡದೆ ಗೌತಮ್ ಹೊರಟಿದ್ದಾನೆ. ಈ ವೇಳೆ ಅಂಗಡಿ ಮಾಲೀಕ ಹಣ ಕೇಳಿದ್ದಕ್ಕೆ ನಾನ್ ಯಾರು ಅಂತ ಗೊತ್ತಾ? ನನ್ನ ಹತ್ರಾನೆ ಹಣ ಕೇಳ್ತಿಯಾ ನಾನು ಬಂದಾಗೆಲ್ಲಾ ನಾನ್ ಏನ್ ಕೇಳ್ತಿನೋ ಅದನ್ನ ಕೊಡಬೇಕು. ಇಲ್ಲ ಅಂದ್ರೆ ನಿನ್ನ, ನಿನ್ನ ಅಂಗಡಿನ ಚಿಂದಿ ಚಿಂದಿ ಮಾಡ್ತಿನಿ ಅಂತ ಬೆದರಿಸಿ ಹಲ್ಲೆಗೆ ಮುಂದಾಗಿದ್ದಾನೆ.
ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಅಂಗಡಿ ಮಾಲೀಕ ಆಡುಗೋಡಿ ಠಾಣೆಗೆ ಹೋಗಿ ದೂರು ನೀಡಿದ್ದ. ದೂರು ದಾಖಲಿಸಿದ ಆಡುಗೋಡಿ ಪೊಲೀಸ್ರು ಗೌತಮ್‌ನ ಬಂಧಿಸಿ, ಗೌತಮ್ ಬಳಿಯಿದ್ದ ಸುಮಾರು 1.5 ಅಡಿ ಉದ್ದದ ಚಾಕುವನ್ನ ಸೀಜ್ ಮಾಡಿದ್ದಾರೆ.
PublicNext
08/02/2025 04:55 pm